ರಾಜಸ್ಥಾನ ಚುನಾವಣೆ: ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ

ರಾಜಸ್ಥಾನ ರಾಜ್ಯದಲ್ಲಿ ಹೇಗಾದರೂ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್,...
ವಸುಂದರಾ ರಾಜೇ ಮತ್ತು ಮನ್ವೇಂದ್ರ ಸಿಂಗ್
ವಸುಂದರಾ ರಾಜೇ ಮತ್ತು ಮನ್ವೇಂದ್ರ ಸಿಂಗ್
ಜೈಪುರ: ರಾಜಸ್ಥಾನ ರಾಜ್ಯದಲ್ಲಿ ಹೇಗಾದರೂ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ವಸುಂದರಾ ರಾಜೇ ಅವರನ್ನು ಸೋಲಿಸಲು ಭರ್ಜರಿ ರಣತಂತ್ರವನ್ನೇ ರೂಪಿಸಿದೆ. 
ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ವಿರುದ್ಧ, ಬಿಜೆಪಿ ಹಿರಿಯ ನಾಯಕ, ವಾಜಪೇಯಿ ಅವಧಿಯಲ್ಲಿ ಪ್ರಬಲವಾಗಿದ್ದ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ. 
ಕಳೆದ ತಿಂಗಳಷ್ಟೇ ಕಾಂಗ್ರೆಸ್'ಗೆ ಸೇರ್ಪಡೆಯಾಗಿದ್ದ ಮನ್ವೇಂದ್ರ ಸಿಂಗ್ ಅವರು ಡಿ.7 ರಂದು ನಡೆಯುವ ಚುನಾವಣೆಗೆ, ಸಿಎಂ ರಾಜೇ ಸ್ಪರ್ಧಿಸಿರುವ ಜಲ್ವಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲಿದ್ದಾರೆ. 
ಜಲ್ವಾರ್ ಜಿಲ್ಲೆಯ ಈ ವಿಧಾನಸಭಾ ಕ್ಷೇತ್ರದಲ್ಲಿ 2003ರಿಂದಲೂ ರಾಜೇಯವರು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಳೆದುತೂಗಿ ತಮ್ಮ ಹಳೆಯ ಸಾಧಿ, ಬಿಜೆಪಿಯ ಥಿಂಕ್ ಟ್ಯಾಂಕ್ ಎಂದೇ ಹೇಳಲಾಗುತ್ತಿದ್ದ ಜಸ್ವಂತ್ ಸಿಂಗ್ ಪುತ್ರನನ್ನೇ ಸಿಎಂ ವಿರುದ್ಧ ಕಣಕ್ಕಳಿಸಿದೆ. ಸೆ.22 ರಂದು ಮನ್ವೇಂದ್ರ ಸಿಂಗ್ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com