14 ಗಂಟೆ ಹೈಡ್ರಾಮಾ ಕೊನೆಗೂ ಅಂತ್ಯ; ಅಯ್ಯಪ್ಪ ದರ್ಶನಕ್ಕೆ ಬಂದಿದ್ದ ತೃಪ್ತಿ ದೇಸಾಯಿ ವಾಪಸ್

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅಯ್ಯಪ್ಪ ದರ್ಶನ ಪಡೆಯದೇ ವಾಪಸ್ ಆಗಿದ್ದಾರೆ.
ತೃಪ್ತಿ ದೇಸಾಯಿ ಮತ್ತು ಪ್ರತಿಭಟನಾ ನಿರತ ಅಯ್ಯಪ್ಪ ಭಕ್ತರು
ತೃಪ್ತಿ ದೇಸಾಯಿ ಮತ್ತು ಪ್ರತಿಭಟನಾ ನಿರತ ಅಯ್ಯಪ್ಪ ಭಕ್ತರು
ಕೊಚ್ಚಿ: ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಅಯ್ಯಪ್ಪ ದರ್ಶನ ಪಡೆಯದೇ ವಾಪಸ್ ಆಗಿದ್ದಾರೆ.
ತೃಪ್ತಿ ದೇಸಾಯಿ ಮತ್ತು ಅವರ ತಂಡದ ಶಬರಿಮಲೆ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಯ್ಯಪ್ಪಸ್ವಾಮಿ ಭಕ್ತರು ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲೇ ತಡೆದಿದ್ದರು. ನಿರಂತರ ಪ್ರತಿಭಟನೆ ಹಿನ್ನಲೆಯಲ್ಲಿ ತೃಪ್ತಿ ದೇಸಾಯಿ ಮತ್ತು ಅವರ ತಂಡ ಕೊಚ್ಚಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಯಿತು. ಸುಮಾರು 14 ಗಂಟೆಗಳ ಕಾಲ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೊನೆಗೆ ಪೊಲೀಸರ ಸಲಹೆ ಮೇರೆಗೆ ತೃಪ್ತಿ ದೇಸಾಯಿ ಮತ್ತು ಅವರ ತಂಡವನ್ನು ಮನವೊಲಿಸಿ ಪುಣೆಗೆ ವಾಪಸ್ ಕಳುಹಿಸಲಾಗಿದೆ.
14 ಗಂಟೆ ಹೈಡ್ರಾಮಾ 
- ಬೆಳಗ್ಗೆ 4.40ಕ್ಕೆ ಆಗಮಿಸಿದ ತೃಪ್ತಿ ದೇಸಾಯಿ ತಂಡ, ಆಗಲೇ ಪ್ರತಿಭಟನಾಕಾರರ ಜಮಾವಣೆ 
- ವಿಮಾನ ನಿಲ್ದಾಣದಿಂದ ಹೊರಬರದಂತೆ ದಿಗ್ಬಂಧನ, ಹಿಂದಕ್ಕೆ ಕಳುಹಿಸಲು ಆಗ್ರಹ 
- ಮರಳುವ ಮನವಿಗೆ ಒಪ್ಪದ ತೃಪ್ತಿ, ಮಧ್ಯಾಹ್ನದ ಹೊತ್ತಿಗೆ ಭಕ್ತರ ಸಂಖ್ಯೆ ಹೆಚ್ಚಳ 
- ತೃಪ್ತಿ ತಂಡವನ್ನು ಕರೆದೊಯ್ಯಲು ಖಾಸಗಿ ವಾಹನ ಚಾಲಕರ ಸಂಘದ ನಿರಾಕರಣೆ 
- ಸಂಜೆ 6.30ಕ್ಕೆ ಪಟ್ಟು ಸಡಿಲಿಸಿ ಮರಳಲು ಒಪ್ಪಿದ ಮಹಿಳಾ ತಂಡ 
- 200 ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಕೇಸು ದಾಖಲು 
- ರಾತ್ರಿ 9.25ರ ವಿಮಾನದಲ್ಲಿ ಪುಣೆ ಹೊರಟ ಮಹಿಳಾ ಕಾರ್ಯಕರ್ತೆಯರ ತಂಡ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com