ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?
ದೇಶ
ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?
ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಚಂಡೀಗಢ: ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಅದು ಒಂದು ಗುಂಪಿನ ಮೇಲೆ ನಡೆದಿರುವ ದಾಳಿಯಾಗಿದೆ, ಆದ್ದರಿಂದ ಇದನ್ನು ಭಯೋತ್ಪಾದಕ ಕೃತ್ಯದ ದೃಷ್ಟಿಯಿಂದಲೇ ತನಿಖೆ ನಡೆಸುತ್ತೇವೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯವಾಗಿರದೇ ಇದ್ದರೆ ಸಮೂಹದ ಮೇಲೆ ಗ್ರೆನೇಡ್ ದಾಳಿ ನಡೆಸುವ ಸಾಧ್ಯತೆಗಳು ಕಡಿಮೆ ಇದೆ ಎಂದು ಪಂಜಾಬ್ ಡಿಜಿಪಿ ಸುರೇಶ್ ಅರೋರ ಹೇಳಿದ್ದಾರೆ.
ಇದೇ ವೇಳೆ ಸ್ಫೋಟದ ಘಟನೆ ಕುರಿತು ನಿರ್ದಿಷ್ಟವಾದ ಸುಳಿವು ಸಿಕ್ಕಿಲ್ಲ ಎಂದೂ ಡಿಜಿಪಿ ತಿಳಿಸಿದ್ದಾರೆ. ನಿರಾನ್ಕಾರಿ ಭವನದಲ್ಲಿ ಸ್ಫೋಟ ಸಂಭವಿಸಿದ್ದು ಮೂವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ