ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ನಾನು ಹೇಳಿದ್ದು ತನಿಖೆಯ ವರದಿಯನ್ನಷ್ಟೇ: ಸಿಎಂ ಖಟ್ಟರ್ ಸ್ಪಷ್ಟನೆ
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ನಾನು ಹೇಳಿದ್ದು ನನ್ನ ಅಭಿಪ್ರಾಯವನ್ನಲ್ಲ ತನಿಖಾ ವರದಿಯ ಅಂಶಗಳನ್ನು ಮಾತ್ರ ಬಹಿರಂಗ ಪಡಿಸಿದ್ದೇನೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಚಂಡೀಘಡ: ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ನಾನು ಹೇಳಿದ್ದು ನನ್ನ ಅಭಿಪ್ರಾಯವನ್ನಲ್ಲ ತನಿಖಾ ವರದಿಯ ಅಂಶಗಳನ್ನು ಮಾತ್ರ ಬಹಿರಂಗ ಪಡಿಸಿದ್ದೇನೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಚಂಡೀಘಡದಲ್ಲಿ ಮಾತನಾಡಿದ ಸಿಎಂ ಖಟ್ಟರ್ ಅವರು, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ನೀಡಿದ್ದ ಹೇಳಿಕೆ ನನ್ನ ಅಭಿಪ್ರಾಯವಲ್ಲ. ಆದರೆ ಅದು ಅಧಿಕಾರಿಗಳು ನನಗೆ ನೀಡಿದ ತನಿಖಾ ವರದಿಗಳ ಹೂರಣವಷ್ಟೇ ಎಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳ ಬಗ್ಗೆ ರಾಜಕೀಯ ಮಾಡದೇ ಇಂತಹ ಗಂಭೀರ ವಿಚಾರದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
Maine sehmati nahi kaha, maine between known kaha. Ye meri oer se kahi gayi baat nahi hai yeh investigations se aaya fact hai. Isse samajik taur pe deal karna chahiye, isme raajneeti nahi dekhni chahiye: Haryana CM ML Khattar on his earlier remark on rape cases pic.twitter.com/WYKNzimvLf