ಸಿಬಿಐ ಅಂತಃಕಲಹ: ಸಿವಿಸಿ ತನಿಖಾ ವರದಿ ಕುರಿತು ಸುಪ್ರೀಂಗೆ ಪ್ರತ್ಯುತ್ತರ ಸಲ್ಲಿಸಿದ ಅಲೋಕ್ ವರ್ಮಾ

ಸಿಬಿಐ ನಿರ್ದೇಆಕ ಅಲೋ ಕುಮಾರ್ ವರ್ಮಾ ತಮ್ಮ ಮೇಲಿನ ಭ್ರಷ್ಠಾಚಾರ ಆರೋಪಕ್ಕೆ ಸಾಂಬಂಧಿಸಿ ಸಿವಿಸಿಯ ಪ್ರಾಥಮಿಕ ತನಿಖಾ ವರದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ಆದೇಶದಂತೆ....
ಅಲೋಕ್ ವರ್ಮಾ
ಅಲೋಕ್ ವರ್ಮಾ
ವದೆಹಲಿ: ಸಿಬಿಐ ನಿರ್ದೇಆಕ ಅಲೋ ಕುಮಾರ್ ವರ್ಮಾ ತಮ್ಮ ಮೇಲಿನ ಭ್ರಷ್ಠಾಚಾರ ಆರೋಪಕ್ಕೆ ಸಾಂಬಂಧಿಸಿ ಸಿವಿಸಿಯ ಪ್ರಾಥಮಿಕ ತನಿಖಾ ವರದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ಆದೇಶದಂತೆ ಅಲೋಕ್ ವರ್ಮಾ ತಮ್ಮ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದಾರೆ.
ಇದಕ್ಕೆ ಮುನ್ನ ವರ್ಮಾ ತಮ್ಮ ವಿರುದ್ಧದ ಆರೋಪಕ್ಕೆ ಸಾಕಷ್ಟು ಶೀಘ್ರವಾಗಿ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ವರ್ಮಾ ಅವರಿಗೆ ತಾಕೀತು ಮಾಡಿತ್ತು.ಅಲ್ಲದೆ ವರ್ಮಾ ಪರ ವಕೀಲರು ಕೋರಿದಂತೆ ಹೆಚ್ಚಿನ ಸಮಯಾವಕಾಶ ನೀಡಲು ಬರುವುದಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು. ಆದರೀ ಕಡೆಗೆ ಮೂರು ಗಂಟೆಗಳ ಗಡುವನ್ನು ವಿಧಿಸಿ ನ್ನ್ಯಾಯಾಲಯ ತೀರ್ಮಾನ ನೀಡಿತ್ತು. 
ಇದರಂತೆ ವರ್ಮಾ ಮದ್ಯಾಹ್ನ ಮೂರು ಗಂಟೆಗಳೊಳಗೆ ಕೋರ್ಟ್ ಗೆತಮ್ಮ ಪ್ರತಿಕ್ರಿಯೆ ನೀಡಬೇಕಾಗಿತ್ತು. ಅಂತೆಯೇ ನ್ಯಾಯಾಲಯದೆದುರು ವರ್ಮಾ ತಮ್ಮ ಪ್ರತಿಕ್ರಿಯೆಯನ್ನು ನೀಡಿ ಆದೇಶವನ್ನು ಪರಿಪಾಲಿಸಿದ್ದಾರೆ.
ತಮ್ಮ ಮೇಲಿನ ಭ್ರಷ್ಠಾಚಾರ ಆರೋಪಕ್ಕೆ ಸಂಬಂಧಿಸಿ ಸೋಮವಾರದೊಳಗೆ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆತಲ್ಲಿ ವರ್ಮಾ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೋರ್ಟ್ನವೆಂಬರ್ 16ರ<ದು ಆದೇಶಿಸ್ದ್ದು ಇದರಂತೆ ಇಂದಿನ ವಿಚಾರಣೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com