ಮಾಧ್ಯಮಗಳು ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗಬಾರದು: ಪ್ರಣಬ್ ಮುಖರ್ಜಿ

ಮಾಧ್ಯಮ ಪಕ್ಷಪಾತ ಕಾರ್ಯಸೂಚಿಗಳಿಂದ ದೂರವಿರಬೇಕು ಎಂದು ಹೇಳಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ....
ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬಳಗದ ದೆಹಲಿಯ ಹೊಸ ದೈನಿಕ ಪತ್ರಿಕೆ ದ ಮಾರ್ನಿಂಗ್ ಸ್ಟಾಂಡರ್ಡ್ ನ್ನು ಉದ್ಘಾಟಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬಳಗದ ದೆಹಲಿಯ ಹೊಸ ದೈನಿಕ ಪತ್ರಿಕೆ ದ ಮಾರ್ನಿಂಗ್ ಸ್ಟಾಂಡರ್ಡ್ ನ್ನು ಉದ್ಘಾಟಿಸಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ನವದೆಹಲಿ: ಮಾಧ್ಯಮ ಪಕ್ಷಪಾತ ಕಾರ್ಯಸೂಚಿಗಳಿಂದ ದೂರವಿರಬೇಕು ಎಂದು ಹೇಳಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಅಧಿಕಾರ ಮತ್ತು ಸಾರ್ವಜನಿಕರ ಮಧ್ಯೆ ಕಾವಲುನಾಯಿಯಾಗಿ, ದ್ವಾರಪಾಲಕನಂತೆ ಮತ್ತು ಮಧ್ಯವರ್ತಿಯಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ.

ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಬಳಗದ ದೆಹಲಿಯ ಹೊಸ ದಿನ ಪತ್ರಿಕೆ 'ದ ಮಾರ್ನಿಂಗ್ ಸ್ಟಾಂಡರ್ಡ್' ನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರವನ್ನು ಬಣ್ಣಿಸುತ್ತಿದ್ದರು.

ಇಂದು ನಾವು ಇತಿಹಾಸದ ಕವಲುದಾರಿಯಲ್ಲಿ ನಿಂತಿದ್ದೇವೆ. ನಮ್ಮ ರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ-ಆರ್ಥಿಕ ರಚನೆಯನ್ನು ನಾಶಮಾಡಲು ಕೆಲವು ಶಕ್ತಿಗಳು ಹೊಂಚುಹಾಕುತ್ತಿವೆ. ಅಂತವುಗಳ ಯೋಜನೆಗಳನ್ನು ನಾಶಮಾಡಲು ಗಟ್ಟಿಯಾದ ಮಾಧ್ಯಮ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸತ್ಯ, ನಿಖರತೆಗೆ ಗಟ್ಟಿಯಾಗಿ ಅಂಟಿಕೊಳ್ಳುವ ಮೂಲಕ ಮಾಧ್ಯಮ ನ್ಯಾಯೋಚಿತ ಮತ್ತು ಸಮಗ್ರತೆಯನ್ನು ಹೆಚ್ಚಿಸುವಂತೆ ವರ್ತಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರನಾಗಿರುವ ಮಾಧ್ಯಮ ಯಾವತ್ತೂ ಎಚ್ಚರವಾಗಿರಬೇಕು ಎಂದರು. ಈ ಮಧ್ಯೆ ಮಾಧ್ಯಮಗಳಲ್ಲಿ ಬರುವ ನಕಲಿ ಸುದ್ದಿಗಳ ಬಗ್ಗೆ ಕೂಡ ಪ್ರಸ್ತಾಪಿಸಿದ ಅವರು ಮಾಧ್ಯಮಗಳಿಗೆ ಇದನ್ನು ತಡೆಗಟ್ಟುವುದು ಅತಿದೊಡ್ಡ ಸವಾಲಾಗಿದೆ ಎಂದರು.

ರೂಂಪಾಂತರಗೊಳಿಸುವ ಚಿತ್ರಗಳು, ಸುಳ್ಳು ಟ್ವೀಟ್ ಗಳು, ಫೋಟೋ ಶಾಪ್ ಮಾಡಿದ, ತಿರುಚಿದ ಹೇಳಿಕೆಗಳು, ಫೋಟೋಗಳು ಇತ್ಯಾದಿ ಸಾಮಾಜಿಕ, ರಾಜಕೀಯ ಮತ್ತು ಕೋಮು ಉದ್ವಿಗ್ನತೆಯನ್ನು ಸಮಾಜದಲ್ಲಿ ಸೃಷ್ಟಿಸುತ್ತದೆ. ನಾಗರಿಕರ ಮನಸ್ಸಿನ ಮೇಲೆ ಪ್ರಭಾವ ಬೀರುವ ಶಕ್ತಿ ಪತ್ರಕರ್ತರಿಗೆ ಎಂಬುದರ ಅರಿವು ಅವರಿಗಿರಬೇಕು. ಹೀಗಾಗಿ ಇಂದು ಮಾಧ್ಯಮಗಳನ್ನು ಜಾಗೃತೆಯಿಂದ, ಜವಾಬ್ದಾರಿಯುತವಾಗಿ ಮತ್ತು ಧೈರ್ಯಗಳಿಂದ ಬಳಸುವ ಅನಿವಾರ್ಯತೆಯಿದೆ ಎಂದರು.

ಇದೇ ವೇಳೆ ಹಣ ಪಡೆದು ಪ್ರಕಟಿಸುವ ಸುದ್ದಿಗಳ ಕುರಿತು ಕೂಡ ಪ್ರಸ್ತಾಪಿಸಿದ ಮುಖರ್ಜಿ, ಕೆಲವು ಮಾಧ್ಯಮಗಳ ಉದ್ದೇಶದ ಕುರಿತು ಪ್ರಶ್ನೆಗಳು ಮೂಡುತ್ತವೆ ಎಂದರು.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಅಧ್ಯಕ್ಷ ಮನೋಜ್ ಸೊಂತಲಿಯಾ, ದೆಹಲಿ ಜನತೆಯ ಸೇವೆಗೆಂದು ಹೊಸ ಪತ್ರಿಕೆಯನ್ನು ಸಂಸ್ಥೆ ಆರಂಭಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com