ತಮಿಳುನಾಡು: ಗಜಾ ಚಂಡಮಾರುತ ಎಪೆಕ್ಟ್ , ಕರುಣಾನಿಧಿ ಪೂರ್ವಜರ ಮನೆಗೆ ಹಾನಿ
ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಂಥಾಲಯ ಹಾಗೂ ಸ್ಮಾರಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದ ಮನೆ ಮೇಲೆ ಮುಂಭಾಗದಲ್ಲಿನ ಮರ ಬಿದ್ದು, ಮೇಲ್ಘಾವಣೆಗೆ ಹಾಗೂ ಮನೆಯ ಹೆಸರು ಕಿತ್ತುಹೋಗಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 16 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿದ ಗಜಾ ಚಂಡಮಾರುತದಿಂದ 46 ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.