ಅಮೆರಿಕದ ಪ್ರವಾಸಿಗ ಅಂಡಮಾನ್ ನಲ್ಲಿ ಮತಾಂತರ ಮಾಡುತ್ತಿರಲಿಲ್ಲ: ಕೇಂದ್ರ ಸರ್ಕಾರ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸೆಂಟಿನಲೀಸ್ ಬುಡಕಟ್ಟು ಜನರಿಂದ ಹತ್ಯೆಗೀಡಾಗಿದ್ದ ಅಮೆರಿಕದ ಪ್ರವಾಸಿಗ ಮತಾಂತರ ಮಾಡಲು ಅಲ್ಲಿಗೆ ಹೋಗಿದ್ದ ಎಂದು ಹೇಳಲಾಗುತ್ತಿದೆ.
ಅಮೆರಿಕದ ಪ್ರವಾಸಿಗ ಅಂಡಮಾನ್ ನಲ್ಲಿ ಮತಾಂತರ ಮಾಡುತ್ತಿರಲಿಲ್ಲ: ಕೇಂದ್ರ ಸರ್ಕಾರ
ಅಮೆರಿಕದ ಪ್ರವಾಸಿಗ ಅಂಡಮಾನ್ ನಲ್ಲಿ ಮತಾಂತರ ಮಾಡುತ್ತಿರಲಿಲ್ಲ: ಕೇಂದ್ರ ಸರ್ಕಾರ
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸೆಂಟಿನಲೀಸ್ ಬುಡಕಟ್ಟು ಜನರಿಂದ ಹತ್ಯೆಗೀಡಾಗಿದ್ದ ಅಮೆರಿಕದ ಪ್ರವಾಸಿಗ ಮತಾಂತರ ಮಾಡಲು ಅಲ್ಲಿಗೆ ಹೋಗಿದ್ದ ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಪ್ರವಾಸಿಗ ಅಂಡಮಾನ್ ನಲ್ಲಿ ಮತಾಂತರ ಮಾಡುತ್ತಿರಲಿಲ್ಲ ಎಂದು ಹೇಳಿದೆ. 
ಗೃಹ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರವಾಸಿಗ ಜಾನ್ ಅಲೆನ್ ಚೌ ಮಿಷನರಿ ಕಾರ್ಯದಲ್ಲಿ ತೊಡಗಿದ್ದ ಎಂಬ ವರದಿಗಳನ್ನು ನಿರಾಕರಿಸಿದ್ದು, ಪ್ರವಾಸಿಗ ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ ಆದರೆ ಆತ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ, ಆತ ಎಲ್ಲಾ ದೃಷ್ಟಿಯಿಂದಲೂ ಸೂಕ್ಷ್ಮವಾದ ಪ್ರದೇಶಕ್ಕೆ ತೆರಳಿ ಆಪತ್ತನ್ನು ಆಹ್ವಾನಿಸಿಕೊಂಡ ಎಂದು ಹೇಳಿದೆ. 
ಆ ದ್ವೀಪಕ್ಕೆ ಹೋಗುವುದಕ್ಕೂ ಮುನ್ನ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಪರಿಸರ ಮತ್ತು ಅರಣ್ಯ ಸಚಿವಾಲಯ, ಎಫ್ಆರ್ ಆರ್ ಒ ಯಿಂದ ಅನುಮತಿ ಪಡೆಯಬೇಕಿತ್ತು. ಆದರೆ ಜಾನ್ ಅಲೆನ್ ಚೌ ಅದ್ಯಾವುದನ್ನೂ ಮಾಡಿಲ್ಲ ಎಂದು ಗೃಹ ಇಲಾಖೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com