ಉತ್ತರ ಪ್ರದೇಶದ ರಾಂಪುರದಲ್ಲಿ ಹಳಿ ತಪ್ಪಿದ ರೈಲಿನ ಆರು ಬೋಗಿಗಳು: ಸಂಚಾರದಲ್ಲಿ ವ್ಯತ್ಯಯ

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮೊರದಾಬಾದ್-ಬರೇಲಿ ಜಂಕ್ಷನ್ ನ ದಮೊರ ಮತ್ತು ದುಗ್ಗನ್ ...
ಹಳಿ ತಪ್ಪಿದ ರೈಲು
ಹಳಿ ತಪ್ಪಿದ ರೈಲು

ರಾಂಪುರ: ಉತ್ತರ ಪ್ರದೇಶದ  ರಾಂಪುರ ಜಿಲ್ಲೆಯ ಮೊರದಾಬಾದ್-ಬರೇಲಿ ಜಂಕ್ಷನ್ ನ ದಮೊರ ಮತ್ತು ದುಗ್ಗನ್ ನಿಲ್ದಾಣದ ಮಧ್ಯೆ ರೈಲಿನ ಆರು ಹಳಿಗಳು ಹಳಿ ತಪ್ಪಿದ ಘಟನೆ ಕಳೆದ ರಾತ್ರಿ ನಡೆದಿದೆ.

ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ರೈಲು ಹಳಿ ತಪ್ಪಿದ್ದರಿಂದ ಕನಿಷ್ಠ 17 ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.

ಬೋಗಿ ಹಳಿ ತಪ್ಪಿದ್ದರಿಂದ ಯಾವುದೇ ಹಾನಿಯುಂಟಾಗಿಲ್ಲ. ಇದೀಗ ಮೊರದಾಬಾದ್ ಚಂದೌಸಿ-ಬರೇಲಿ ಮಾರ್ಗವಾಗಿ ರೈಲು ಸಂಚರಿಸುತ್ತಿವೆ.

ಪ್ರಯಾಣಿಕರಿಗೆ ಬದಲಿ ಮಾರ್ಗದ ಬಗ್ಗೆ ಮಾಹಿತಿ ಮತ್ತು ಸಹಾಯಕ್ಕೆ ತುರ್ತು ಸಹಾಯವಾಣಿಯನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com