
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ರಾತ್ರಿ ಮಕ್ಕಳ ಅಪಹರಣಕಾರರು ಎಂದು ಅನುಮಾನಿಸಿ ಆರು ಮಂದಿ ಆಫ್ರಿಕಾ ದೇಶದ ಪ್ರಜೆಗಳ ಮೇಲೆ ದಾಳಿ ನಡೆಸಲಾಗಿದೆ.
ದ್ವಾರದಲ್ಲಿನ ಕಾಕ್ರೋಲಾದಿಂದ ನಾಲ್ವರು ತಾಂಜಾನಿಯನ್ ಮತ್ತು ಇಬ್ಬರು ನೈಜಿರಿಯಾದ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಕ್ಷಿಸಲ್ಪಟ್ಟಿರುವವರಲ್ಲಿ ಒಬ್ಬ ಮಕ್ಕಳ ಅಪಹರಣದಲ್ಲಿ ಆರೋಪಿಯಾಗಿದ್ದು, ಅವರ ವಿರುದ್ಧ ನೂರಾರು ಮಂದಿ ಕರೆ ಸ್ವೀಕರಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಆಫ್ರಿಕಾದ ಜನರು ವಾಸಿಸುತ್ತಿರುವ ಕಟ್ಟಡದ ಹೊರಗಡೆ ಸುಮಾರು 200ಕ್ಕೂ ಸಾರ್ವಜನಿಕರನ್ನು ನೆರೆದಿದ್ದರು ಎಂದು ಪೊಲೀಸ್ ವರದಿಯಲ್ಲಿ ಹೇಳಲಾಗಿದೆ.
Advertisement