ರಾಮ ಮಂದಿರ ಹೋರಾಟದಲ್ಲಿ ಶಿವಸೇನೆ ಪಾತ್ರವಿಲ್ಲ: ಉತ್ತರಪ್ರದೇಶ ಉಪ ಮುಖ್ಯಮಂತ್ರಿ

ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಯ ಪಾತ್ರವಿಲ್ಲ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭಾನುವಾರ ಹೇಳಿದ್ದಾರೆ...
ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ
ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ
ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಯ ಪಾತ್ರವಿಲ್ಲ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭಾನುವಾರ ಹೇಳಿದ್ದಾರೆ. 
ರಾಮ ಮಂದಿರ ನಿರ್ಮಾಣ ದಿನಾಂಕ ಘೋಷಣೆ ಮಾಡುವಂತೆ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಆಗ್ರಹಿಸುತ್ತಿರುವ ಉದ್ಧವ್ ಠಾಕ್ರೆ ಕುರಿತಂತೆ ತೀವ್ರ ಅಸಮಾಧಾ ವ್ಯಕ್ತಪಡಿಸಿರುವ ಅವರು, ರಾಮಮಂದಿರಕ್ಕೆ ಠಾಕ್ರೆ ಭೇಟಿಯಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಬಾಳಸಾಹೇಬ್ ಠಾಕ್ರೆಯವರು ಬದುಕಿದ್ದರೆ, ಉದ್ಧವ್ ಠಾಕ್ರೆಯವರು ಮಾಡುತ್ತಿರುವ ಕೆಲಸಗಳಿಗೆ ಕಡಿವಾಣ ಹಾಕುತ್ತಿದ್ದರು ಎಂದು ಹೇಳಿದ್ದಾರೆ. 
ರಾಮ ಮಂದಿರ ಹೋರಾಟದಲ್ಲಿ ಶಿವಸೇನೆಯ ಪಾತ್ರವಿಲ್ಲ. ಧರ್ಮಸಭೆಯಲ್ಲಿಯೂ ಶಿವಸೇನೆ ಪಾತ್ರವಿಲ್ಲ. ಬಾಳಸಾಹೇಬ್ ಠಾಕ್ರೆ ಇದ್ದಿದ್ದರೆ ವಿಶ್ವ ಹಿಂದೂ ಪರಿಷತ್'ಗೆ ಬೆಂಬಲ ನೀಡುತ್ತಿದ್ದರು. ಉದ್ಧವೇ ಠಾಕ್ರೆಯವರು ವಿಹೆಚ್'ಪಿ ಜೊತೆಗೂಡಬೇಕು. ವಿಹೆಚ್'ಪಿ ಕೂಡ ಹೋರಾಟದಲ್ಲಿ ಭಾಗಿಯಾಗಿದೆ. ವಿಭಜನೆ ಮಾಡುವ ಯಾವುದೇ ಅವಶ್ಯಕತೆಗಳೂ ಇಲ್ಲ ಎಂದು ತಿಳಿಸಿದ್ದಾರೆ. 
ರಾಮನಿಗಾಗಿ ಯಾರು ನಿಜವಾಗಿಯೂ ತ್ಯಾಗ ಮಾಡುತ್ತಾರೆಂಬುದು ಭಕ್ತರಿಗೆ ತಿಳಿದಿದೆ. ಈ ಹಿಂದೆ ತ್ಯಾಗ ಮಾಡಿದವರಾದರೂ ಯಾರು? ಎಂದು ಪ್ರಶ್ನಿಸಿದ್ದಾರೆ. 
ಭದ್ರತಾ ಸಿಬ್ಬಂದಿಗಳ ನಿಯೋಜನೆ ಕುರಿತಂತೆ ಅಖಿಲೇಶ್ ಯಾವದ್ ಅವರು ನೀಡಿದ್ದ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಅಖಿಲೇಶ್ ಅವರ ಈ ಹೇಳಿಕೆ ಅವರಲ್ಲಿರುವ ಹತಾಶೆಯನ್ನು ತೋರಿಸುತ್ತದೆ. 1990ರ ಪರಿಸ್ಥಿತಿ ಮರುಕಳಿಸಲಿದೆ ಎಂದು ಅಖಿಲೇಶ್ ಅವರು ತಿಳಿಯುತ್ತಿರುವುದೇ ಆದರೆ, ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಅಡಿಯಲ್ಲಿ ಅಂತಹ ಪರಿಸ್ಥಿತಿಗಳು ಎದುರಾಗುವುದಿಲ್ಲ. ಅಯೋಧ್ಯೆಯಲ್ಲಿ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಧರ್ಮಸಭೆಯಾಗಿದ್ದು, ಸೇನೆಯನ್ನು ನಿಯೋಜಿಸುವ ಅಗತ್ಯವಿಲ್ಲ. ಇದನ್ನು ಅಖಿಲೇಶ್ ಯಾದವ್ ಅವರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಬಳಿಕ ಧರ್ಮಸಭೆಗೆ ಸ್ಥಳದಲ್ಲಿರುವ ಮುಸ್ಲಿಂ ಸಮುದಾಯದವರು ಭೀತಿ ವ್ಯಕ್ತಪಡಿಸುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಉತ್ತರಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಹಳಷ್ಟು ಮುಸ್ಲಿಂ ಸಮುದಾಯದವರು ಬಯಸಿದ್ದಾರೆ. ಆದರೆ, ಕೆಲ ರಾಜಕೀ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದಿದ್ದಾರೆ. 
ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬೆಂಬಲ ನೀಡಿದೆ. ರಾಮ ಮಂದಿರ ವಿಚಾರ ಹಿಂದೂಗಳ ನಂಬಿಕೆಗೆ ಸಂಬಂಧ ವಿಚಾರವಾಗಿದ್ದು, ಈ ವಿಚಾರದಲ್ಲಿ ಚುನಾವಣಾ ರಾಜಕೀಯ ಮಾಡುವುದಿಲ್ಲ. ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಸ್ತುತ ರಾಮ ಮಂದಿರ ವಿಚಾರವಿದ್ದು, ಬಿಜೆಪಿಯಾಗಲೀ, ಇತರೆ ಸಂಘಟನೆಗಳಾಗಲೀ ಮಂದಿರ ನಿರ್ಮಾಣದ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com