ಸಂಗ್ರಹ ಚಿತ್ರ
ದೇಶ
ಪತ್ರಕರ್ತ ಬುಖಾರಿ ಹತ್ಯೆಗೈದಿದ್ದ ಎಲ್ಇಟಿ ಉಗ್ರ ನವೀದ್ ಎನ್'ಕೌಂಟರ್'ನಲ್ಲಿ ಹತ
ಕಾಶ್ಮೀರಿ ಪತ್ರಕರ್ತ ಶುಜಾತ್ ಬುಖಾರಿಯವರನ್ನು ಹತ್ಯೆಗೈದಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೊಹಮ್ಮದ್ ನವೀದ್ ಜುಟ್ ನನ್ನು ಭಾರತೀಯ ಸೇನಾಪಡೆಗಳು ಬುಧವಾರ ಹತ್ಯೆ ಮಾಡಿದೆ...
ಶ್ರೀನಗರ: ಕಾಶ್ಮೀರಿ ಪತ್ರಕರ್ತ ಶುಜಾತ್ ಬುಖಾರಿಯವರನ್ನು ಹತ್ಯೆಗೈದಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೊಹಮ್ಮದ್ ನವೀದ್ ಜುಟ್ ನನ್ನು ಭಾರತೀಯ ಸೇನಾಪಡೆಗಳು ಬುಧವಾರ ಹತ್ಯೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಬಡಗಾಂವ್ ಜಿಲ್ಲೆಯ ಛಾತೇರ್'ಗಾಂವ್ ನಲ್ಲಿ ಇಂದು ಬೆಳಿಗ್ಗೆ ಸೇನಾಪಡೆಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನವೀದ್ ನನ್ನು ಹತ್ಯೆ ಮಾಡಿದೆ.
ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಹಾಗೂ ಪೊಲೀಸರು ಸ್ಥಳದಲ್ಲಿ ಭಾರೀ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರು ಅಡಗಿಕುಳಿತಿದ್ದ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿತ್ತು. ಸ್ಥಳದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು, ಎನ್'ಕೌಂಟರ್ ನಲ್ಲಿ ಪತ್ರಕರ್ತ ಬುಖಾರಿಯವರನ್ನು ಹತ್ಯೆ ಮಾಡಿದ್ದ ಉಗ್ರ ನವೀದ್ ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ