'ಅಯ್ಯಪ್ಪನ ದೇಗುಲ ಪ್ರತಿಭಟನೆಯ ತಾಣವಲ್ಲ. ಅಲ್ಲಿ ಇಂತಹ ಚಟುವಟಿಕೆಗಳು ನಡೆಯಬಾರದು ಎಂದು ಕೋರ್ಟ್ ಹೇಳಿದೆ. ಅಂತೆಯೇ ದೇಗುಲದ ಬಳಿ ಪೊಲೀಸರು ಹೇರಿರುವ ನಿರ್ಬಂಧದ ಬಗ್ಗೆಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಂಡಲ-ಮಕರವಿಳಕ್ಕು ಹಬ್ಬದ ವೇಳೆ ನಿಗಾ ಇಡಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ಆರ್. ರಾಮನ್ ಹಾಗೂ ಸಿರಿ ಜಗನ್, ಹಿರಿಯ ಐಪಿಎಸ್ ಅಧಿಕಾರಿ ಎ. ಹೇಮಚಂದ್ರನ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ನೀಳಕ್ಕಲ್ ಹಾಗೂ ಸನ್ನಿಧಾನಂ ಬಸ್ ಸಂಚಾರದ ಮೇಲೆ ಪೊಲೀಸರು ಹೇರಿರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆಯೂ ಕೋರ್ಟ್ ಸೂಚಿಸಿದೆ.