ಎಲ್ಇಟಿ ಉಗ್ರನ ಮೃತದೇಹ ಕೊಂಡೊಯ್ಯುವಂತೆ ಪಾಕ್'ಗೆ ಸೂಚಿಸಿ: ಗೃಹ ಸಚಿವಾಲಯಕ್ಕೆ ಜಮ್ಮು ಕಾಶ್ಮೀರ ಡಿಜಿಪಿ

ಹತ್ಯೆಯಾಗಿರುವ ಎಲ್ಇಟಿ ಉಗ್ರನ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಸೂಚಿಸುವಂತೆ ಗೃಹ ಸಚಿವಾಲಯದ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಘ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಹತ್ಯೆಯಾಗಿರುವ ಎಲ್ಇಟಿ ಉಗ್ರನ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಸೂಚಿಸುವಂತೆ ಗೃಹ ಸಚಿವಾಲಯದ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಘ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರನ ಮೃತದೇಹ ಕೊಂಡೊಯ್ಯುವ ಕುರಿತು ಪಾಕಿಸ್ತಾನಕ್ಕೆ ತಿಳಿಸುವಂತೆ ಗೃಹ ಸಚಿವಾಲಯಕ್ಕೆ ಶೀಘ್ರದಲ್ಲಿಯೇ ಪತ್ರ ಪಡೆಯುತ್ತೇವೆಂದು ಸಿಂಗ್ ತಿಳಿಸಿದ್ದಾರೆ. 
ಹತ್ಯೆಯಾಗಿರುವ ಜುಟ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕನಾಗಿದ್ದು, 6 ವಿವಿಧ ಎನ್'ಕೌಂಟರ್ ಗಳಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಅಂತಿಮವಾಗಿ ಸೇನೆ ಇಂದು ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಸೇನೆ ನಡೆಸಿದ್ದ ಎನ್'ಕೌಂಟರ್ ನಲ್ಲಿ ಕಾಶ್ಮೀರಿ ಪತ್ರಕರ್ತ ಶುಜಾತ್ ಬುಕಾರಿಯವರನ್ನು ಹತ್ಯೆ ಮಾಡಿದ್ದ ನವೀದ್ ಜುಟ್'ನನ್ನು ಹತ್ಯೆ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com