ಒಡಿಶಾ: ಬಿಜೆಪಿ ಹಿರಿಯ ನಾಯಕರಾದ ರಾಯ್, ಮಹಾಪತ್ರ ರಾಜೀನಾಮೆ

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದೀಲಿಪ್ ರಾಯ್ ಮತ್ತು ರಾಷ್ಟ್ರೀಯ ಪ್ರತಿನಿಧಿ ಬಿಜಯ್ ಮಹಾಪತ್ರ ....
ದೀಲಿಪ್ ರಾಯ್
ದೀಲಿಪ್ ರಾಯ್
Updated on
ಭುವನೇಶ್ವರ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದೀಲಿಪ್ ರಾಯ್ ಮತ್ತು ರಾಷ್ಟ್ರೀಯ ಪ್ರತಿನಿಧಿ ಬಿಜಯ್ ಮಹಾಪತ್ರ ಅವರು ಶುಕ್ರವಾರ ಪಕ್ಷ ತೊರೆದಿದ್ದು, ಬಿಜೆಪಿಯ ಮಿಷನ್ 120+ಗೆ ಭಾರಿ ಹಿನ್ನಡೆಯಾಗಿದೆ.
ರಾಯ್ ಅವರು ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಬಳಿಕ ಒಡಿಶಾ ವಿಧಾನಸಭೆ ಸ್ಪೀಕರ್ ಪ್ರದೀಪ್ ಅಮತ್ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ರಾಯ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ.
ಇನ್ನು ಈ ರಾಜೀನಾಮೆ ಕುರಿತು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲೂ ರಾಯ್ ಪೋಸ್ಟ್ ಹಾಕಿದ್ದು, 2019ರ ವಿಧಾನಸಭೆ ಚುನಾವಣೆಯಲ್ಲಿ ತಾವು ರುರ್ಕೆಲಾದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಾಪತ್ರ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಬಿಜೆಪಿ ತೊರೆದಿರುವ ಈ ಇಬ್ಬರು ನಾಯಕರು ಬಿಜೆಡಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com