ಈ ಬಗ್ಗೆ ಸ್ವತಃ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಕಳೆದವಾರ ಎಕೆ 47 ಗನ್ ಗಳೊಂದಿಗೆ ನಾಪತ್ತೆಯಾಗಿದ್ದ ಎಸ್ ಪಿಒ ಅಧಿಕಾರಿ ಅದಿಲ್ ಬಷೀರ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾರೆ. ಅವರು ಹಿಜ್ಬುಲ್ ಉಗ್ರ ಸಂಘಟನೆ ಕಮಾಂಡರ್ ಜೀನತ್ ಉಲ್ ಇಸ್ಲಾಂ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದ್ದಾರೆ.