ರಫೇಲ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ: ವಾಯುಸೇನಾ ಮುಖ್ಯಸ್ಥ

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಬುಧವಾರ ಹೇಳಿದ್ದಾರೆ...
ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ
ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋವಾ ಅವರು ಬುಧವಾರ ಹೇಳಿದ್ದಾರೆ. 
ರಫೇಲ್ ಯುದ್ಧ ವಿಮಾನ ಖರೀದಿ ವಿವಾದ ಕುರಿತಂತೆ ಮಾತನಾಡಿರುವ ಅವರು, ರಫೇಲ್ ಒಪ್ಪಂದ ಮಾಡಿಕೊಳ್ಳುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಎದುರಾಳಿ ಸಾಮರ್ಥ್ಯವನ್ನು ಸರಿದೂಗಿಸಲು ಸರ್ಕಾರ ಹೈ-ಟೆಕ್ ವಿಮಾನವನ್ನು ವಾಯುಸೇನೆಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 
ಇಂದು ನಾವು ಬಿಕ್ಕಟ್ಟಿನ ಸ್ಥಿತಿಗೆ ತಲುಪಿದ್ದೇವೆ. ನಮಗೆ ಕೇವಲ ಮೂರು ಆಯ್ಕೆಗಳಿದ್ದು, ಏನಾದರೂ ಘಟನೆ ಸಂಭವಿಸುವವರೆಗೂ ನಾವು ಕಾಯಬೇಕಿದೆ, ಇಲ್ಲವೇ ಪ್ರತಿಕ್ರಿಯೆಗಳಿಗಾಗಿ ಕಾಯಬೇಕಾಗಿರುತ್ತದೆ. ಅಥವಾ, ತುರ್ತು ಖರೀದಿ ಮಾಡಬೇಕಾಗಿರುತ್ತದೆ. ತುರ್ತು ಖರೀದಿಯನ್ನೂ ಮಾಡಿದ್ದೇವೆ. ರಫೇಲ್ ಹಾಗೂ ಎಸ್-400 ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. 
ರಫೇಲ್ ಒಪ್ಪಂದದಲ್ಲಿ ಫ್ರೆಂಚ್ ಫೈಟರ್ ಜೆಟ್ ಉತ್ಪಾದಕ ಡಸ್ಸಾಲ್ಟ್ ತನ್ನ ಪಾಲುದಾರನನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಇದರಲ್ಲಿ ಭಾರತೀಯ ವಾಯುಸೇನೆಯಾಗಲೀ ಅಥವಾ ಭಾರತ ಸರ್ಕಾರದ ಯಾವುದೇ ಪಾತ್ರವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com