ಹೃದಯ ವಿದ್ರಾವಕ: 100 ಜನರ ಪ್ರಾಣ ಉಳಿಸಿದ್ದ ಕೇರಳದ ಹೀರೋ, ಜೀವ ಉಳಿಸಿ ಎಂದು ಅಂಗಲಾಚಿ ಪ್ರಾಣಬಿಟ್ಟ!

ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಜೀವದ ಹಂಗು ತೊರೆದು ನೂರಾರು ಜನರ ಪ್ರಾಣ ಉಳಿಸಿ ಹೀರೋ ಆಗಿದ್ದ ಜಿನೇಶ್ ಎಂಬ...
ಜಿನೇಶ್
ಜಿನೇಶ್
Updated on
ತಿರುವನಂತಪುರಂ: ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಜೀವದ ಹಂಗು ತೊರೆದು ನೂರಾರು ಜನರ ಪ್ರಾಣ ಉಳಿಸಿ ಹೀರೋ ಆಗಿದ್ದ ಜಿನೇಶ್ ಎಂಬ ಯುವಕ ಅಪಘಾತವಾಗಿ ಸಹಾಯಕ್ಕಾಗಿ ಅಂಗಲಾಚಿಯೇ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. 
ಜಿನೇಶ್ ಮತ್ತು ಆತನ ಸ್ನೇಹಿತ ಜಗನ್ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಆಗ ಆಯಾ ತಪ್ಪಿ ರಸ್ತೆ ಮೇಲೆ ಬಿದ್ದ ಜಿನೇಶ್ ಮೇಲೆ ಲಾರಿಯೊಂದು ಹರಿದಿದ್ದು ಪರಿಣಾಮ ಆನತ ಸೊಂಟದ ಭಾಗದ ನಜ್ಜುಗುಜ್ಜಾಗಿತ್ತು. ಇದರಿಂದ ಸಹಾಯಕ್ಕಾಗಿ ಜಿನೇಶ್ ಅಂಗಲಾಚುತ್ತಿದ್ದ ಆದರೆ ಯಾರು ಸಹಾಯ ಮಾಡಲು ಮುಂದೆ ಬಾರದಿದ್ದರಿಂದ ಜಿನೇಶ್ ಮೃತಪಟ್ಟಿದ್ದಾರೆ. 
ಅಪಘಾತವಾಗಿ ಸುಮಾರು 30 ನಿಮಿಷಗಳ ನಂತರ ಆ್ಯಂಬುಲೆನ್ಸ್ ಬಂದಿತ್ತು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಿನೇಶ್ ಸಾವನ್ನಪ್ಪಿದ್ದು ಜಗನ್ ಪ್ರಾಣಾಪಾಯದಿಂದ ಪಾರಾಗಿದ್ದ. 
ಸ್ನೇಹಿತನ ಸಾವಿನ ಬಗ್ಗೆ ನೊಂದು ಮಾತನಾಡಿರುವ ಜಗನ್, ಜಿನೇಶ್ ಯಾರೇ ಒಬ್ಬರು ಅಪಾಯದಲ್ಲಿದ್ದರು ಅವರನ್ನು ರಕ್ಷಿಸಲು ತಾನು ಮುಂದಿರುತ್ತಿದ್ದ. ಅಂತಹವನು ಅಪಘಾತವಾಗಿ ರಕ್ಷಿಸಿ, ರಕ್ಷಿಸಿ ಎಂದು ಗೋಗರೆಯುತ್ತಿದ್ದರು. ಸಹಾಯ ಮಾಡಲು ಯಾರು ಮುಂದೆ ಬರಲಿಲ್ಲ ಎಂದು ಜಗನ್ ಕಣ್ಣೀರು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com