ಬಿಜೆಪಿಗೆ ಗುಡ್ ಬೈ ಹೇಳಲು ಪ್ರಧಾನಿ ಮೋದಿ ತದ್ರೂಪಿ ನಿರ್ಧಾರ: ಕಾಂಗ್ರೆಸ್ ಸೇರಲು ಸಿದ್ಧತೆ

ಹೋಲಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ , ಅವರ ನಿಷ್ಠಾವಂತ ಅಭಿಮಾನಿ ಎಂದೇ ಕರೆಯಲಾಗುತ್ತಿದ್ದ ಅಭಿನಂದನ್ ಪಾಠಕ್, ಬಿಜೆಪಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ಅಭಿನಂದನ್ ಪಾಠಕ್
ಅಭಿನಂದನ್ ಪಾಠಕ್

ಲಖನೌ: ಹೋಲಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ, ಅವರ ನಿಷ್ಠಾವಂತ ಅಭಿಮಾನಿ ಎಂದೇ ಕರೆಯಲಾಗುತ್ತಿದ್ದ ಅಭಿನಂದನ್ ಪಾಠಕ್, ಬಿಜೆಪಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

ಶಹರನ್ ಪುರ ನಿವಾಸಿಯಾದ ಇವರು ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಗೋರಕ್ ಪುರ ಉಪ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಆದರೆ, ಈಗ ಬಿಜೆಪಿ ಆಡಳಿತದಿಂದ ಬೇಸತ್ತಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತದ ಜನ ರೋಸಿ ಹೋಗಿದ್ದು, ಯಾವಾಗ ಒಳ್ಳೆಯ ದಿನ ಬರುತ್ತದೆ ಎಂದು ಜನರು ಕೇಳುತ್ತಿದ್ದಾರೆ ಎಂದು ಹೇಳುವ ಅವರು, ಈಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರನ್ನು ಭೇಟಿ ಮಾಡಿದ್ದು,  ಅವರು ಸೋನಿಯಾ ಗಾಂಧಿ ಜೊತೆಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಮ್ಮಗೆ ಅಸಮಾಧಾನವಿಲ್ಲ. ಮೋದಿ ವಿಶ್ವದಾದ್ಯಂತ ದೇಶಕ್ಕೆ ಉತ್ತಮ ವರ್ಚಸ್ಸು ತಂದುಕೊಟ್ಟಿದ್ದಾರೆ. ಆದರೆ, ಪಕ್ಷದ ಕಾರ್ಯನಿರ್ವಹಣೆಗೆ ತಮ್ಮ ವಿರೋಧವಿದೆ. ಮನ್ ಕೀ ಬಾತ್ ಬಗ್ಗೆ ಪ್ರಚಾರ ಮಾಡುವ ಬಿಜೆಪಿ ಸಾಮಾನ್ಯ ಜನರ ಹೃದಯದಲ್ಲಿ ಏನು ಇದೆ ಎಂದು  ಕೇಳುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com