ಆಯುಷ್ಮಾನ್ ಭಾರತ್: ಅರ್ಹ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳಿಗೆ ಎನ್'ಹೆಚ್ಎ ಸುತ್ತೋಲೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತಾಂಕ್ಷಿ 'ಆಯುಷ್ಮಾನ್ ಯೋಜನೆ'ಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಷ್ಟ್ರೀಯ...
ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತಾಂಕ್ಷಿ 'ಆಯುಷ್ಮಾನ್ ಯೋಜನೆ'ಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯೊಂದರನ್ನು ಹೊರಡಿಸಿದ್ದು, ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರ್ತಿಸುವಂತೆ ಶನಿವಾರ ಸೂಚಿಸಿದೆ. 
ಬಡವರಿಗೆ ಉಪಯೋಗವಾಗುವ ಸಲುವಾಗಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯನ್ನು ಕೆಲವರು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅರ್ಹತೆಯಿಲ್ಲದವರು ಯೋಜನೆಯ ಫಲಾನುಭವಿಗಳಾಗಿದ್ದಾರೆಂದು ವರದಿಗಳಾಗಿರುವ ಹಿನ್ನಲೆಯಲ್ಲಿ ರಾಷ್ಟ್ರೀ ಆರೋಗ್ಯ ಪ್ರಾಧಿಕಾರ ಇದೀಗ ಎಚ್ಚೆತ್ತುಕೊಂಡಿದೆ. ಈ ಹಿನ್ನಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರ್ತಿಸುವಂತೆ ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. 
ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (ಎಸ್ಇಸಿಸಿ)ಯಲ್ಲಿ ಕೆಲ ಷರತ್ತುಗಳನ್ನು ವಿಧಿಸಿ ಈ ಮೂಲಕ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರ್ತಿಸುವಂತೆ ಅಧಿಕಾರಿಗಳಿಗೆ ಎನ್'ಹೆಚ್ಎ ಸೂಚನೆ ನೀಡಿದೆ. 
ಎಸ್ಇಸಿಸಿ 2011 ಗ್ರಾಮೀಣ ಮತ್ತು ನಗರಾಭಿವೃದ್ಧಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಅಧ್ಯಯನವಾಗಿದೆ. ಇದು ಪೂರ್ವ ನಿರ್ಧಾರಿತ ನಿಯತಾಂಕಗಳನ್ನು ಆಧರಿಸಿ ಮನೆಗಳಿಗೆ ಶ್ರೇಣಿಯನ್ನು ನೀಡುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಒಟ್ಟಾರೆ ಸಮನ್ವಯದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗುತ್ತದೆ. 
ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (ಎಸ್ಇಸಿಸಿ)ಯಲ್ಲಿ ಜನರ ಮನೆಯಲ್ಲಿ ದ್ವಿಚಕ್ರ, ಮೂರು ಚಕ್ರಗಳು, ನಾಲ್ಕು ಚಕ್ರಗಳನ್ನು, ಮೀನು ಹಿಡಿಯುವ ಬೋಟುಗಳು, ಯಾತ್ರೀಕೃತ ಕೃಷಿ ಉಪಕರಣಗಳು, ಕಿಸಾನ್ ಕ್ರೆಡಿಟ್ ಕಾರ್ಡ್, ರೂ.50ಸಾವಿರಕ್ಕೂ ಹೆಚ್ಚು ಹಣವನ್ನು ಖಾತೆಯಲ್ಲಿ ಹೊಂದಿದ್ದಾರೆಯೇ, ಸರ್ಕಾರಿ ಉದ್ಯೋಗಸ್ಥರೇ ಎಂಬಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. 
ತಿಂಗಳಿಗೆ ರೂ.10 ಸಾವಿರಕ್ಕೂ ಹೆಚ್ಚು ದುಡಿಯುತ್ತಿರುವವರು, ತೆರಿಗೆ ಪಾವತಿ ಮಾಡುತ್ತಿರುವವರು, ಮೂರು ಅಥವಾ ಅದಕ್ಕೂ ಹೆಚ್ಚು ಕೊಠಿಡಿಗಳನ್ನು ಮನೆಯಲ್ಲಿ ಹೊಂದಿರುವವರು, ಫ್ರಿರ್ಡ್, ಲ್ಯಾಂಡ್ ಲೈನ್ ಫೋನ್ ಗಳನ್ನು ಹೊಂದಿರುವವರು ಯೋಜನೆಯಿಂದ ಹೊರಗಿಡಲಾಗುತ್ತದೆ. ಜನಗಣತಿಯಲ್ಲಿ ಇಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕಿದ್ದರು, ಅರ್ಹತೆಯೇ ಇಲ್ಲದ ಜನರು ಫಲಾನುಭವಿಗಳಾಗಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. 
ಹೀಗಾಗಿ ಎಚ್ಚೆತ್ತುಕೊಂಡಿರುವ ಎನ್'ಹೆಚ್ಎ ಇದೀಗ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರ್ತಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. 
ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಾ ಮಿಷನ್ (ಎಬಿ-ಎನ್'ಹೆಚ್'ಪಿಎಂ) 50 ಕೋಟಿ ಜರನ್ನು ಒಳಗೊಳ್ಳುವ ಯೋಜನೆಯಾಗಿದ್ದು, ಬಡವರ ಆಶಾಕಿರಣವಾಗಿದೆ. ಇದು ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕಾರಿ ಸರ್ಕಾರ ವಾರ್ಷಿಕ ಸುಮಾರು ರೂ.12 ಸಾವಿರ ಕೋಟಿ ವೆಚ್ಚ ಮಚಾಡಲಿದೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ವಿಮಾ ಸೌಲಭ್ಯನ್ನು ನೀಡಲಾಗುತ್ತದೆ. 
ದೇಶದ 10 ಕೋಟಿ ಕುಟುಂಬಗಳ ಜನರು ಅಥವಾ 50 ಕೋಟಿ ಜನ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ಯೋಜನೆಗೆ ನೊಂದಾಯಿಸಿಕೊಂಡಿರುವ ರಾಜ್ಯಗಳ ಆರೋಗ್ಯ ಯೋಜನೆ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಫಲಾನುಭವಿಗಳೂ ಸಹ ಆಯುಷ್ಮಾನ್ ಭಾರತದ ಪ್ರಯೋಜನವನ್ನು ಪಡೆಯಲಿದ್ದಾರೆ. 
ಚಿಂದಿ ಆಯುವವರು, ಭಿಕ್ಷುಕರು, ದೇಶೀಯ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಲ್ಲು ಹೊರುವವರು, ಕಾರ್ಮಿಕರು, ವರ್ಣ ಚಿತ್ರಕಾರರು, ಭದ್ರತಾ ಸಿಬ್ಬಂದಿಗ, ಕೂಲಿ ಕಾರ್ಮಿಕಲು ಹಾಗೂ ನೈರ್ಮಲ್ಯ ಕೆಲಸಗಾರರು ಸೇರಿ ಬಡಲವು ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com