ಎಸ್-400 ಟ್ರಯುಂಫ್: ಏಕಕಾಲಕ್ಕೆ 72 ಕ್ಷಿಪಣಿ ಸಿಡಿಸುವ ಸಾಮರ್ಥ್ಯ,ಒಂದೇ ಬಾರಿಗೆ 36 ಟಾರ್ಗೆಟ್ !

ಅಮೆರಿಕಾದ ನಿರ್ಬಂಧ, ಒತ್ತಡಗಳ ನಡುವೆ ಭಾರತ- ರಷ್ಯಾ ನಿನ್ನೆ ಮಾಡಿಕೊಂಡ ಐತಿಹಾಸಿಕ ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯಿಂದ ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಸಿಡಿಸಬಹುದಾಗಿದ್ದು, ಒಂದೇ ಬಾರಿಗೆ 36 ಟಾರ್ಗೆಟ್ ಮಾಡಬಹುದಾಗಿದೆ
ಎಸ್- 400 ಧೀರ್ಘ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ
ಎಸ್- 400 ಧೀರ್ಘ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ

ನವದೆಹಲಿ: ಅಮೆರಿಕಾದ ನಿರ್ಬಂಧ, ಒತ್ತಡಗಳ ನಡುವೆ ಭಾರತ- ರಷ್ಯಾ ನಿನ್ನೆ ಮಾಡಿಕೊಂಡ ಐತಿಹಾಸಿಕ ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯಿಂದ ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಸಿಡಿಸಬಹುದಾಗಿದ್ದು, ಒಂದೇ ಬಾರಿಗೆ  36  ಟಾರ್ಗೆಟ್  ಮಾಡಬಹುದಾಗಿದೆ

ದೀರ್ಘ ಮತ್ತು ಮಧ್ಯಮ ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ವಾಯುಪಡೆಗೆ ಹೆಚ್ಚಿನ ಪ್ರಮಾಣದಲ್ಲಿ  ಅಗತ್ಯವಿದ್ದು,  ನಿಗೂಢ  ವಿಮಾನ  ಮತ್ತಿತರ  ಯಾವುದೇ  ರೀತಿಯ ವೈಮಾನಿಕ ದಾಳಿಗಳನ್ನು  ನಾಶಪಡಿಸುವಂತೆ ಅಭಿವೃದ್ದಿಪಡಿಸಲಾಗಿರುತ್ತದೆ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ದೋಹಾ ತಿಳಿಸಿದ್ದಾರೆ.

 ದ್ವಿಪಕ್ಷೀಯ ಮಾತುಕತೆಯ ನಂತರ ಎಸ್-400 ಧೀರ್ಘ ಮತ್ತು ಮಧ್ಯಮ ಶ್ರೇಣಿಯ ವಾಯು ಕ್ಷಿಪಣಿ  ವ್ಯವಸ್ಥೆಯನ್ನು ಭಾರತಕ್ಕೆ ಪೂರೈಸುವ  ಒಪ್ಪಂದವನ್ನು ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್  ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು.

ಕ್ಷಿಪಣಿ ವ್ಯವಸ್ಥೆಗಳ ವಿತರಣೆಯು 5  ಬಿಲಿಯನ್ ಡಾಲರ್ ನಷ್ಟಾಗಿದ್ದು, ನೆರಯ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾದಿಂದ ಆಗಬಹುದಾದ ವಾಯುದಾಳಿಯನ್ನ ನಿಯಂತ್ರಿಸಲು ಈ ಕ್ಷಿಪಣಿ ವ್ಯವಸ್ಥೆ ನೆರವಾಗಲಿದೆ.

ಇದು ದೇಶದಲ್ಲಿಯೇ ಅತ್ಯಂತ ಮಾರಕ ಶಸ್ತ್ರಾಸ್ತ್ರಗಳ ವ್ಯವಸ್ಥೆಯಾಗಿದ್ದು, ನಾಲ್ಕು ವಿಭಿನ್ನ ರೀತಿಯ ಲೇಯರ್ಡ್ ವಾಯು ರಕ್ಷಣೆಯನ್ನು ಒದಗಿಸುತ್ತದೆ ಎಂದು ವಾಯುಪಡೆ ಉಪ ಮಾರ್ಷಲ್ (ನಿವೃತ್ತ) ಮನಮೋಹನ್ ಬಹದ್ದೂರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

1999ರಲ್ಲಿ ಮೊದಲ ಬಾರಿಗೆ ಇದನ್ನು ಅಸ್ಟ್ರಖಾನ್ ವಲಯದಲ್ಲಿ ಪ್ರದರ್ಶಿಸಲಾಗಿತ್ತು.2000ದಲ್ಲಿ  ಆಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. 2007 ಏಪ್ರಿಲ್ ನಿಂದ ಈ ಕ್ಷಿಪಣಿ ವ್ಯವಸ್ಥೆ ಸೇವೆ ಪ್ರಾರಂಭಿಸಿದೆ.

ಎಸ್- 400 ವ್ಯವಸ್ಥೆಯಲ್ಲಿ ಎತ್ತರದ ರೇಡಾರ್, ಅಂಟೆನಾ ಗಾಗಿ ಚಲಿಸಬಲ್ಲಾ ಟವರ್ ಮತ್ತಿತರ  ವ್ಯವಸ್ಥೆಗಳನ್ನು ಹೆಚ್ಚುವರಿಯಾಗಿ ಹೊಂದಿದೆ. 600 ಕಿಲೋ ಮೀಟರ್ ದೂರದವರೆಗೂ ಇದು ಗುರಿ ತಲುಪಲಿದೆ. ಅದರ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿ ವಿನಾಶ ವ್ಯಾಪ್ತಿಯು ಐದು ಕಿಲೋಮೀಟರ್ ಗಳಿಂದ  60 ಕಿ.ಮೀವರೆಗೂ  ಬದಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com