ನಾಯಿಗೆ ಕ್ಷಮೆ ಕೇಳದಕ್ಕೆ ಚೂರಿಯಿಂದ ಆರು ಬಾರಿ ಇರಿದು ಕೊಂದ ನೆರೆಮನೆಯವರು!

ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು ಆತನಿಗೆ ಚೂರಿ ಇರಿದು ಕೊಲೆ ಮಾಡಿದ್ದಾರೆ. 
ನವದೆಹಲಿಯಲ್ಲಿ ಈ ಘಟನೆ ನಡೆಸಿದ್ದು ವಿಜೇಂದ್ರ ರಾಣಾ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ವಿಜೇಂದ್ರ ಲಾರಿ ಚಾಲಕನಾಗಿದ್ದು ಮಧ್ಯರಾತ್ರಿ ಮನೆಗೆ ಬರುತ್ತಿದ್ದರು. ಈ ವೇಳೆ ಟಾಮಿ(ನಾಯಿ)ಯೊಂದಿಗೆ ಮೂವರು ಮಧ್ಯರಾತ್ರಿಯಲ್ಲಿ ತಿರುಗಾಡಲು ತೆರಳಿದ್ದಾರೆ. 
ವಿಜೇಂದ್ರ ರಾಣಾ ನಡೆದುಕೊಂಡು ಬರುತ್ತಿದ್ದುದ್ದನ್ನು ಕಂಡ ಟಾಮಿ ಬೊಗಳಲು ಶುರು ಮಾಡಿದೆ. ಈ ವೇಳೆ ರಾಣಾ ನಾಯಿಯನ್ನು ಬೈದು ಬೆದರಿಸಿ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮೂವರು ಬಂದು ನಾಯಿಗೆ ಕ್ಷಮೆ ಕೇಳುವಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ರಾಣಾ ವಿರೋಧಿಸಿದ್ದರಿಂದ ಮೂವರು ಸೇರಿ ರಾಣಾಗೆ ಚೂರಿಯಿಂದ ಆರು ಬಾರಿ ಇರಿದಿದ್ದಾರೆ. 
ಅಣ್ಣನ ಕೂಗಾಟವನ್ನು ಕೇಳಿ ಹೊರ ಬಂದ ಸಹೋದರ ಆತನ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿದ್ದರಿಂದ ರಾಣಾನನ್ನು ಕೂಡಲೇ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com