ಹೆತ್ತ ತಾಯಿ-ತಂದೆಯಿಂದ ಕಿಡ್ನಿ ದಾನಕ್ಕೆ ನಿರಾಕರಣೆ, ಕೊನೆಗೆ ಕಿಡ್ನಿ ದಾನ ಮಾಡಿ ಸೊಸೆ ಜೀವ ಉಳಿಸಿದ ಅತ್ತೆ!

ಕಿಡ್ನಿ ವೈಫಲ್ಯದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗಳಿಗೆ ಹೆತ್ತ ತಂದೆ ತಾಯಿಯರೇ ಕಿಡ್ನಿ ದಾನ ಮಾಡಲು ಹಿಂದೇಟು ಹಾಕಿದ್ದಕ್ಕೆ ಕೊನೆಗೆ ಅತ್ತೆಯೇ...
ರಾಗಿ ದೇವಿ-ಸೋನಿಕಾ
ರಾಗಿ ದೇವಿ-ಸೋನಿಕಾ
ಜೈಸ್ಮಲೇರ್: ಕಿಡ್ನಿ ವೈಫಲ್ಯದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗಳಿಗೆ ಹೆತ್ತ ತಂದೆ ತಾಯಿಯರೇ ಕಿಡ್ನಿ ದಾನ ಮಾಡಲು ಹಿಂದೇಟು ಹಾಕಿದ್ದಕ್ಕೆ ಕೊನೆಗೆ ಅತ್ತೆಯೇ ಸೊಸೆಗೆ ಕಿಡ್ನಿ ದಾನ ಮಾಡಿ ಸೊಸೆಯ ಜೀವ ಉಳಿಸಿದ್ದಾರೆ. 
32 ವರ್ಷದ ಸೋನಿಕಾ ದೇವಿ ಮೂತ್ರ ಪಿಂಡಗಳ ವೈಫಲ್ಯಕ್ಕೆ ಒಳಗಾಗಿದ್ದು ಆಕೆಯನ್ನು ಉಳಿಸಿಕೊಳ್ಳಬೇಕೆಂದರೆ ಡಯಾಲಿಸಿಸ್ ಮಾಡುತ್ತ ಇರಬೇಕು. ಇಲ್ಲವೇ ಕಿಡ್ನಿ ಕಸಿ ಮಾಡಬೇಕು ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯರು ಹೇಳಿದ್ದರು. 
ಆದರೆ ನಿರಂತರವಾಗಿ ಡಯಾಲಿಸಿಸ್ ಮಾಡಿಸುವುದು ಕಷ್ಟಕರವಾಗಿದ್ದರಿಂದ ಕಿಡ್ನಿ ಕಸಿ ಮಾಡುವುದೇ ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದರು. ಸೋನಿಕಾಗೆ ಕಿಡ್ನಿ ದಾನ ಮಾಡುತ್ತಿರಾ ಎಂದು ಮೊದಲು ಆಕೆಯ ತಾಯಿಯನ್ನು ಕೇಳಲಾಗಿತ್ತು. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದರಿಂದ ತಂದೆಯನ್ನು ಕೇಳಿದ್ದಾರೆ. ತಂದೆಯೂ ಆಗುವುದಿಲ್ಲ ಎಂದು ಹೇಳಿದ ಮೇಲೆ 60 ವರ್ಷದ ಅತ್ತೆ ಗಾನಿ ದೇವಿ ಸೊಸೆಗೆ ಕಿಡ್ನಿ ದಾನ ಮಾಡಿ ಆಕೆಯ ಜೀವ ಉಳಿಸಿದ್ದಾರೆ. 
ಸೆಪ್ಟೆಂಬರ್ 13ಕ್ಕೆ ಸೋನಿಕಾಗೆ ಕಿಡ್ನಿ ಕಸಿ ಮಾಡಲಾಗಿದ್ದು ಆಕೆ ಆರೋಗ್ಯವಾಗಿದ್ದಾಳೆ. ತನಗೆ ಮರುಜೀವ ಕೊಟ್ಟ ಅತ್ತೆಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ ಎಂದು ಎರಡು ಮಕ್ಕಳ ತಾಯಿ ಸೋನಿಕಾ ದೇವಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com