#MeToo ಅಭಿಯಾನ: ಹಿಂದೂಸ್ತಾನ್ ಟೈಮ್ಸ್ ರಾಜಕೀಯ ಸಂಪಾದಕ ರಾಜಿನಾಮೆ

ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮಿ ಟೂ...
ಪ್ರಶಾಂತ್ ಜಾ
ಪ್ರಶಾಂತ್ ಜಾ
Updated on: 
ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ #ಮಿ ಟೂ ಅಭಿಯಾನ ಚುರುಕು ಪಡೆಯುತ್ತಿದ್ದು, ಇದೀಗ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಹಿಂದೂಸ್ತಾನ್ ಟೈಮ್ಸ್ ರಾಜಕೀಯ ಸಂಪಾದಕ ಪ್ರಶಾಂತ್ ಜಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ಪ್ರಧಾನ ಸಂಪಾದಕ ಸುಕುಮಾರ್ ಅವರು ಸಂಪಾದಕೀಯ ಸಿಬ್ಬಂದಿಗೆ ಮೇಲೆ ಮಾಡಿದ್ದು, ಪ್ರಶಾಂತ್ ಜಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಬ್ಯುರೋ ಮುಖ್ಯಸ್ಥ ಹಾಗೂ ರಾಜಕೀಯ ಸಂಪಾದಕ ಸ್ಥಾನ ತ್ಯಜಿಸಿದ್ದಾರೆ. ಸದ್ಯ ಎಲ್ಲಾ ಸಿಬ್ಬಂದಿ ತಮಗೆ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.
ಹಿಂದೂಸ್ತಾನ್ ಟೈಮ್ಸ್ ಮಾಜಿ ವರದಿಗಾರ್ತಿ ಅವಂತಿಕ ಮೆಹ್ತಾ ಅವರು ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಇಬ್ಬರ ನಡುವಿನ ವಾಟ್ಸ್ ಆಪ್ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ಮಿ ಟೂ ಅಭಿಯಾನದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದಲ್ಲಿ #ಮಿ ಟೂ ಅಭಿಯಾನ ಆರಂಭವಾದ ನಂತರ ಲೈಂಗಿಕ ಆರೋಪಕ್ಕಾಗಿ ಉನ್ನತ ಸ್ಥಾನ ಕಳೆದುಕೊಂಡ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಪ್ರಶಾಂತ್ ಜಾ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com