ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಕೇರಳದ ಒಗ್ಗಟ್ಟು ಮುರಿಯುವ ಯತ್ನ: ಸಿಎಂ ಪಿಣರಾಯಿ ವಿಜಯನ್

ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಕೇರಳದ ಒಗ್ಗಟ್ಟು ಮುರಿಯುವ ಯತ್ನ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸಿಎಂ ಪಿಣರಾಯಿ ವಿಜಯನ್
ಸಿಎಂ ಪಿಣರಾಯಿ ವಿಜಯನ್
ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಕೇರಳದ ಒಗ್ಗಟ್ಟು ಮುರಿಯುವ ಯತ್ನ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. 
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರಲು ತಮ್ಮ ಸರ್ಕಾರ ನಿರ್ಧರಿಸಿರುವುದನ್ನು ಪ್ರತಿಭಟಿಸುತ್ತಿರುವುದು ಕೇರಳದ ಜಾತ್ಯತೀತ ಗುರುತಿಗೆ ಧಕ್ಕೆ ಉಂಟುಮಾಡುವ ಪ್ರಯತ್ನವಾಗಿದೆ ಎಂದು  ಪಿಣರಾಯಿ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ವಿವಿಧ ಧಾರ್ಮಿಕ ಪ್ರದೇಶಗಳು ಹಾಗೂ ಧಾರ್ಮಿಕ ನಂಬಿಕೆಗಳನ್ನು ಕಪಾಡುವುದಕ್ಕೆ ಕೇರಳ ಸರ್ಕಾರ ಎಂದಿಗೂ ಬದ್ಧವಾಗಿದೆ. ರಾಜಕೀಯ ಉದ್ದೇಶಗಳಿಂದ ರಾಜ್ಯದಲ್ಲಿ ಉದ್ವಿಗ್ನತೆ ಉಂಟು ಮಾಡುವ ಪ್ರಯತ್ನಗಳಿಗೆ ಜಗ್ಗುವುದಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. 
ಕೇರಳ ರಾಜ್ಯದ ಜನತೆ ಇತ್ತೀಚಿನ ದಿನಗಳಲ್ಲಿ ಜಲಪ್ರವಾಹವನ್ನು ಎದುರಿಸಿ ಸಂಕಷ್ಟದ ದಿನಗಳನ್ನು ಕಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದು ರಾಜ್ಯದ ಒಗ್ಗಟ್ಟು ಮುರಿಯುವ ಯತ್ನವಾಗಿದೆ.  ಒಂದು ವೇಳೆ ಸರ್ಕಾರದ ನಡೆಯನ್ನು ಯಾರಾದರೂ ಅಪಾರ್ಥ ಮಾಡಿಕೊಂಡಿದ್ದರೆ ಅವರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com