ಭೀಕರ ವಿಡಿಯೋ: ಟ್ರೆಕ್ಕಿಂಗ್ ಹೊರಟಿದ್ದ ಐಬಿಎಂ ಟೆಕ್ಕಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ದುರ್ಮರಣ!

ಐಬಿಎಂ ಸ್ಟಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಭೀಕರ ಘಟನೆ ಮುಂಬೈನಲ್ಲಿ ನಡೆದಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಐಬಿಎಂ ಸ್ಟಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಭೀಕರ ಘಟನೆ ಮುಂಬೈನಲ್ಲಿ ನಡೆದಿದ್ದು ಈ ಅಪಘಾತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
31 ವರ್ಷದ ಟೆಕ್ಕಿ ಸುದರ್ಶನ್ ಚೌಧರಿ ಚಾರಣಕ್ಕೆ ತೆರಳಲೆಂದು ಕಳೆದ ಭಾನುವಾರ ಬೆಳಗ್ಗೆ 5.40 ಸುಮಾರಿಗೆ ಮುಂಬೈನ ದಾದರ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಕರ್ಜತ್ ಗೆ ತೆರಳಲು ಪಶ್ಚಿಮ ರೈಲ್ವೇಯಿಂದ ಸೆಂಟ್ರಲ್ ರೈಲ್ವೆಗೆ ರೈಲು ಚೇಂಜ್ ಮಾಡಬೇಕಿತ್ತು. ಅದಾಗಲೇ ಕರ್ಜತ್ ಕಡೆ ಹೋಗುವ ರೈಲು ಹೊರಟ್ಟಿತ್ತು. 
ಈ ರೈಲು ಮಿಸ್ ಮಾಡಿಕೊಂಡರೆ ತಡವಾಗುತ್ತೆ ಅಂದುಕೊಂಡ ಸುದರ್ಶನ್ ಚಲಿಸುತ್ತಿದ್ದ ರೈಲನ್ನೇ ಹತ್ತಲು ಓಡಿದ್ದಾರೆ. ಹೀಗೆ ಓಡುತ್ತಿರಬೇಕಾದರೆ ಕಾಲು ಎಡವಿ ಪ್ಲಾಟ್ ಫಾರಂ ಮೇಲೆ ಬಿದ್ದಿದ್ದು ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದಾರೆ. ಈ ವೇಳೆ ರೈಲು 50 ಮೀಟರ್ ದೂರ ಎಳೆದುಕೊಂಡು ಹೋಗಿದ್ದು ನಿಲ್ದಾಣದಿಂದ ತುಸು ದೂರದಲ್ಲಿ ಸುದರ್ಶನ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಆತನನ್ನ ಗಮನಿಸಿದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಆತನನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. 
ಇನ್ನು ಸುದರ್ಶನ್ ಗಾಗಿ ಕೆಲ ಸ್ನೇಹಿತರು ಕರ್ಜತ್ ನಲ್ಲಿ ಕಾಯುತ್ತಿದ್ದರು. ಎಷ್ಟೇ ಪ್ರಯತ್ನಿಸಿದರು ಆತ ಫೋನ್ ತೆಗೆಯುತ್ತಿರಲ್ಲಿಲ್ಲ. ಕೊನೆಗೆ ಫಾಟ್ಲ್ ಫಾಂ ಹತ್ತಿರ ಫೋನ್ ರಿಂಗಾಗುತ್ತಿದ್ದನ್ನು ಗಮನಿಸಿ ಪ್ರಯಾಣಿಕರು ಫೋನನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮತ್ತೆ ಫೋನ್ ಬಂದಾಗ ಪೊಲೀಸರು ಕರೆ ಸ್ವೀಕರಿಸಿ ಫೋನ್ ಬಿದ್ದು ಸಿಕ್ಕಿರುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಕೊಂಡ ಸುದರ್ಶನ್ ಸ್ನೇಹಿತರು ಸುದರ್ಶನ್ ಗೆ ಎಲ್ಲದರೂ ಅಪಘಾತವಾಗಿರಬಹುದಾ ಎಂದುಚೆಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದು ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com