ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ: ಸುಪ್ರೀಂ ಮೆಟ್ಟಿಲೇರಲು ಕೇರಳ ಮಹಿಳಾ ವೇದಿಕೆ ಸಿದ್ಧತೆ

ಶಬರಿಮಲೆಗೆ ತೆರಳಲು ಮಹಿಳೆಯರಿಗೆ ವಯಸ್ಸಿನ ಮಿತಿ ಇಲ್ಲದೇ ಅನುಮತಿ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರೇರಣೆ ಪಡೆದಿರುವ ಮುಸ್ಲಿಂ ಸಮುದಾಯದ ಮಹಿಳೆಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ: ಸುಪ್ರೀಂ ಮೆಟ್ಟಿಲೇರಲು ಕೇರಳ ಮಹಿಳಾ ವೇದಿಕೆ ಸಿದ್ಧತೆ
ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ: ಸುಪ್ರೀಂ ಮೆಟ್ಟಿಲೇರಲು ಕೇರಳ ಮಹಿಳಾ ವೇದಿಕೆ ಸಿದ್ಧತೆ
Updated on: 
ಶಬರಿಮಲೆಗೆ ತೆರಳಲು ಮಹಿಳೆಯರಿಗೆ ವಯಸ್ಸಿನ ಮಿತಿ ಇಲ್ಲದೇ ಅನುಮತಿ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರೇರಣೆ ಪಡೆದಿರುವ ಮುಸ್ಲಿಂ ಸಮುದಾಯದ ಮಹಿಳೆಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. 
ದೇಶದಲ್ಲಿರುವ ಎಲ್ಲಾ ಮಸೀದಿಗಳಿಗೂ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಮುಸ್ಲಿಂ ಮಹಿಳಾ ವೇದಿಕೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೆ ಸಿದ್ಧತೆ ನಡೆಸಿದೆ. ಎನ್ಐಎಸ್ಎ ಎಂಬ ಪ್ರಗತಿಪರ ಮಹಿಳಾ ಸಂಘಟನೆ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿಗೆ ತೆರಳಿ ಪೂಜೆ ಸಲ್ಲಿಸುವುದಷ್ಟೇ ಅಲ್ಲದೇ ಮಹಿಳೆಯರನ್ನು ಇಮಾಮ್ ಗಳನ್ನಾಗಿ ನೇಮಕ ಮಾಡಬೇಕೆಂದೂ ಸಹ ಬೇಡಿಕೆ ಇಡುವುದಕ್ಕೆ ಮುಂದಾಗಿವೆ. 
ಲಿಂಗಸಮಾನತೆಯನ್ನು ಪ್ರತಿಪಾದಿಸುತ್ತಿರುವ ಮಹಿಳಾ ಸಂಘಟನೆ ಇಸ್ಲಾಮ್ ನಲ್ಲಿರುವ ಹಲವು ಪದ್ಧತಿಗಳನ್ನೂ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಸಜ್ಜುಗೊಂಡಿದ್ದು ನಿಖಾ ಹಲಾಲ್ ನಂತಹ ಅನಿಷ್ಟ ಪದ್ಧತಿಯನ್ನೂ ಕೊನೆಗಾಣಿಸಬೇಕೆಂಬ ಮನವಿ ಸಲ್ಲಿಸಲಿದೆ.  ಮಹಿಳೆಯರು ಮಸೀದಿಗಳಿಗೆ ತೆರಳಬಾರದೆಂಬುದಕ್ಕೆ ಕುರಾನ್ ಅಥವಾ ಪ್ರವಾದಿ ಮೊಹಮದ್ ಅವರ ಹೇಳಿಕೆಗಳಲ್ಲಿ ಎಲ್ಲಿಯೂ ಇಲ್ಲ ಎಂದಿರುವ ಎನ್ಐಎಸ್ಎ ಅಧ್ಯಕ್ಷೆ ವಿಪಿ ಜುಹ್ರಾ, ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com