ಒಡಿಶಾ: ಗೋಪಾಲ್ಪುರದಲ್ಲಿ ತೀವ್ರತರ 'ತಿತ್ಲಿ' ಚಂಡಮಾರುತದಿಂದ ಭೂಕುಸಿತ !

ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲ್ಪುರದಲ್ಲಿ ಇಂದು ಮುಂಜಾನೆಯಿಂದ ತೀವ್ರ ತರವಾದ ಗಂಟೆಗೆ 126 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಚಂಡಮಾರುತದಿಂದಾಗಿ ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ.
ತಿತ್ಲಿ ಚಂಡಮಾರುತ ಪರಿಣಾಮ ವಿಶಾಖಪಟ್ಟಣ್ಣಂ ಬಳಿಯ ಸಮುದ್ರದಲ್ಲಿನ ಭಾರೀ ಅಲೆಗಳು
ತಿತ್ಲಿ ಚಂಡಮಾರುತ ಪರಿಣಾಮ ವಿಶಾಖಪಟ್ಟಣ್ಣಂ ಬಳಿಯ ಸಮುದ್ರದಲ್ಲಿನ ಭಾರೀ ಅಲೆಗಳು

ಭುವನೇಶ್ವರ್: ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲ್ಪುರದಲ್ಲಿ ಇಂದು ಮುಂಜಾನೆಯಿಂದ ತೀವ್ರ ತರವಾದ ಗಂಟೆಗೆ 126 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ  ಚಂಡಮಾರುತದಿಂದಾಗಿ  ಅನೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ.

ತಿತ್ಲಿ ಚಂಡಮಾರುತ  ಇನ್ನೂ ಒಂದು ಅಥವಾ ಎರಡು ಗಂಟೆಗಳಲ್ಲಿ  ಸಂಪೂರ್ಣ ಒಡಿಶಾ ಕರಾವಳಿಯನ್ನು ಆವರಿಸಲಿದ್ದು,  ಭೂ ಕುಸಿತ ಪ್ರಕ್ರಿಯೆ ಆರಂಭವಾಗಿದೆ ಎಂದು  ಭುವನೇಶ್ವರದ ಹವಾಮಾನ ಇಲಾಖೆ ನಿರ್ದೇಶಕ ಹೆಚ್. ಆರ್. ಬಿಸ್ವಾಸ್ ಹೇಳಿದ್ದಾರೆ.

ಚಂಡಮಾರುತದಿಂದ ಹಲವೆಡೆ ಅಪಾರ ಪ್ರಮಾಣದ ಭೂಮಿ ಹಾನಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ  ಇಲಾಖೆ ತಿಳಿಸಿದೆ.

 ಈ ಮಧ್ಯೆ ಗೋಪಾಲ್ಪುರದಲ್ಲಿ ಗಂಟೆಗೆ 126 ಕಿ. ಮೀ. ಆಂಧ್ರಪ್ರದೇಶದ ಕಾಳಿಂಗಪಟ್ಟಣ್ಣಂನಲ್ಲಿ ಗಂಟೆಗೆ 56 ಕಿಲೋ ಮೀಟರ್ ವೇಗದಲ್ಲಿ ಗಾಳಿ  ಬೀಸುತ್ತಿರುವ ಬಗ್ಗೆ ವರದಿಯಾಗಿದೆ.

ತಿತ್ಲಿ ಚಂಡಮಾರುತದ ಪರಿಣಾಮ  ಗಂಜಾಂ, ಗಜಪತಿ, ಪೂರಿ, ಕುರ್ದಾ, ಜಗತ್ ಸಿಂಗ್ ಪುರ್ ಮೊದಲಾದ  ಐದು ಜಿಲ್ಲೆಗಳಲ್ಲಿ ಬೀರುಗಾಳಿ ಸಹಿತ ಮಹಿಳೆಯಾಗುತ್ತಿದ್ದು, ಭೂ ಕುಸಿತ ಪ್ರಕ್ರಿಯೆ ಆರಂಭವಾಗಿದೆ .

ವಿಖಾಖಪಟ್ಟಣಂ,ಗೋಪಾಲ್ಪುರ, ಪ್ಯಾರಾದೀಪ್ ಗಳಲ್ಲಿ  ರಾಡರ್ ಗಳ ಮೂಲಕ ಹವಾಮಾನ ವೈಫರೀತ್ಯದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಬಿಸ್ವಾಸ್ ಹೇಳಿದ್ದಾರೆ. ಮುಂದಿನ ಆರು ಗಂಟೆಗಳ ಅವಧಿಯಲ್ಲಿ ತಿತ್ಲಿ ಚಂಡಮಾರುತ  ಗಂಟೆಗೆ 19 ಕಿಲೋ ಮೀಟರ್ ವೇಗದಲ್ಲಿ ಬಂಗಾಳ ಕೊಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ.

ತೀವ್ರ ತರ ಚಂಡಮಾರುತದಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದಿದ್ದು, ಕೆಲ ಮನೆಗಳಿಗೆ ಹಾನಿಯಾಗಿದೆ. ಗೋಪಾಲ್ಪುರ , ಮೊದಲಾದ ಕಡೆಗಳಲ್ಲಿ ರಸ್ತೆ ಸಂಪರ್ಕ  ಅಸ್ತವ್ಯಸ್ತಗೊಂಡಿದೆ.

ಈ ಮಧ್ಯೆ  ಒಡಿಶಾ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದೆ. ಐದು ಜಿಲ್ಲೆಗಳಲ್ಲಿ ಭೂ ಕುಸಿತದ ಮುನ್ಸೂಚನೆಯಿಂದಾಗಿ ತಗ್ಗುಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 3 ಲಕ್ಷ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com