ರಾಫೇಲ್ ಒಪ್ಪಂದ: ಪಾಲುದಾರಿಕೆಗಾಗಿ ಅಂಬಾನಿಯ ರಿಲಯನ್ಸ್ ನಮ್ಮದೇ ಮುಕ್ತ ಆಯ್ಕೆ- ಡಸ್ಸಾಲ್ಟ್ ಸ್ಪಷ್ಟನೆ

ಡೆಸಾಲ್ಟ್ ರಿಲಯನ್ಸ್ ಏರೋಸ್ಪೆಸ್ ಲಿಮಿಟೆಡ್ ಸ್ಥಾಪಿಸಲು ( ಡಿಆರ್ ಎಎಲ್ ) ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹವನ್ನು ಮುಕ್ತವಾಗಿ ಆಯ್ಕೆ ಮಾಡಿರುವುದಾಗಿ ವಿಮಾನಯಾನ ಕಂಪನಿ ಡಸ್ಸಾಲ್ಟ್ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಸೈಂಟ್ ಕ್ಲೌಡ್: ಪಾಲ್ಕನ್ 2000 ವ್ಯವಹಾರ ಜೆಟ್ ಹಾಗೂ ರಾಫೇಲ್ ಯುದ್ದ ವಿಮಾನಗಳ ಉತ್ಪಾದನಾ ಭಾಗಗಳಿಗಾಗಿ ಜಂಟಿ ಪಾಲುದಾರಿಕೆಯಲ್ಲಿ ಡಸ್ಸಾಲ್ಟ್ ರಿಲಯನ್ಸ್ ಏರೋಸ್ಪೆಸ್ ಲಿಮಿಟೆಡ್ ಸ್ಥಾಪಿಸಲು ಅನಿಲ್ ಅಂಬಾನಿ ಅವರ ರಿಲಯನ್ಸ್ ಕಂಪನಿಯನ್ನು ಮುಕ್ತವಾಗಿ ಆಯ್ಕೆ ಮಾಡಿರುವುದಾಗಿ ವಿಮಾನಯಾನ ಕಂಪನಿ ಡೆಸಲ್ಟ್ ಸ್ಪಷ್ಟಪಡಿಸಿದೆ.
ಪಾಲ್ಕನ್ 2000 ವ್ಯವಹಾರಗಳ ಜೆಟ್ ಹಾಗೂ ಎರಡನೇ ಹಂತದಲ್ಲಿ ರಾಫೆಲ್ ಯುದ್ದ ವಿಮಾನಗಳ ಬಿಡಿಭಾಗಗಗಳ ತಯಾರಿಕೆಗಾಗಿ 2017 ಅಕ್ಟೋಬರ್ 27 ರಂದು ನಾಗ್ಪುರದಲ್ಲಿ ಡೆಸಾಲ್ಟ್ ರಿಲಯನ್ಸ್ ಏರೋಸ್ಪೆಸ್ ಲಿಮಿಟೆಡ್  ಘಟಕ ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ
ಈ ವರ್ಷದ ಅಂತ್ಯದೊಳಗೆ ಪಾಲ್ಕನ್ 2000 ಜೆಟ್ ಗಳ ಮೊದಲ ಭಾಗಗಳನ್ನು ಪೂರೈಸಲಾಗುತ್ತದೆ. ಉತ್ಪಾದನಾ ಪ್ರಕ್ರಿಯೆಗಾಗಿ ಭಾರತದ ಕೌಶಲ್ಯಾಧಾರಿತ ಕೆಲಸಗಾರರು ಹಾಗೂ ಮ್ಯಾನೇಜರ್ ಗಳನ್ನೊಳಗೊಂಡ ತಂಡಕ್ಕೆ ತರಬೇತಿ ನೀಡಲಾಗುವುದು ಎಂದು ಡಸ್ಸಾಲ್ಟ್ ತಿಳಿಸಿದೆ.
ಯುಪಿಎ ಸರ್ಕಾರ 526 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಚಿಂತನೆ ನಡೆಸಿದ ರಾಫೇಲ್ ಯುದ್ದ ವಿಮಾನಗಳನ್ನು ಎನ್ ಡಿಎ ಸರ್ಕಾರ ಪ್ರತಿಯೊಂದು ವಿಮಾನಕ್ಕೂ 1,670 ಕೋಟಿ ರೂ, ವೆಚ್ಚ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com