ಆಂಧ್ರಪ್ರದೇಶ: ಟಿಡಿಪಿ ಸಂಸದ ಸಿಎಂ ರಮೇಶ್ ಮನೆ ಮೇಲೆ ಐಟಿ ದಾಳಿ

ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್‌ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ..
ರಮೇಶ್
ರಮೇಶ್
ವಿಜಯವಾಡ: ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್‌ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುಮಾರು 15 ಮಂದಿಯುಳ್ಳ ಆದಾಯ ತೆರಿಗೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ಹೈದರಾಬಾದ್‌ ಮತ್ತು ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪೋಟ್ಲದುರ್ತಿ  ಹಾಗೂ ಜ್ಯುಬಿಲಿ ಹಿಲ್ಸ್ ನಲ್ಲಿರುವ  ಸಂಸದ ರಮೇಶ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಐಟಿ ದಾಳಿ ಈಗಲೂ ಮುಂದುವರಿದಿದೆ ಎನ್ನಲಾಗಿದೆ,
ರಮೇಶ್ ಸದ್ಯ ದೆಹಲಿಯಲ್ಲಿದ್ದು, ತಮ್ಮ ಮನೆ ಮೇಲೆ ಐಟಿ ದಾಳಿ ನಡೆದಿರುವುದನ್ನು ಖಚಿತ ಪಡಿಸಿದ್ದಾರೆ, ನಾನು ಯಾವುದನ್ನು ಮುಚ್ಚಿಟ್ಟಿಲ್ಲ, ಪರಿಶೀಲನೆಗೆ ಸಹಾಯ ಮಾಡುತ್ತಿದ್ದೇನೆ, ಇದೊಂದು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಸೇಡಿನ ಕ್ರಮವಾಗಿದೆ ಎಂದು ಹೇಳಿದ್ದಾರೆ.
;
ರಮೇಶ್‌ ಅವರು ಆಂಧ್ರ ಪ್ರದೇಶ ಸಿಎಂ ಎನ್‌ ಚಂದ್ರಬಾಬು ನಾಯ್ಡು ಅವರ ಬಂಟನಾಗಿದ್ದಾರೆ. ಈ ಐಟಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂದವರು ಟೀಕಿಸಿದ್ದಾರೆ. ಈ ದಾಳಿಗಳ ಹೊರತಾಗಿಯೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ತಮ್ಮ ಹೋರಾಟವನ್ನು ತಾನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.  ಬಿಜೆಪಿಯ ರಾಜಕೀಯ ಪಿತೂರಿಯಾಗಿದ್ದು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com