ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ - ಜಪಾನ್ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ಅಕ್ಟೋಬರ್ 28-29ರಂದು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಜಪಾನ್ ಪ್ರಧಾನಿ ಶಿಂಝೋ ಅಬೆ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ, ಪ್ರಾದೇಶಿಕ, ಜಾಗತಿಕ ಹಾಗೂ ಇತರೆ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಹಾಗೂ ಅಬೆ ನಡುವಿನ ಐದನೇ ವಾರ್ಷಿಕ ಶೃಂಗ ಸಭೆ ಇದಾಗಿದ್ದು, ಉಭಯ ನಾಯಕರು 2014ರಿಂದ ಇಲ್ಲಿಯವರೆಗೆ 12 ಬಾರಿ ಭೇಟಿ ಮಾಡಿದ್ದಾರೆ.
ಈ ಬಾರಿ ಇಂಡೋ ಪೆಸಿಫಿಕ್ ಪ್ರದೇಶದ ಕುರಿತಂತೆ ಇನ್ನಷ್ಟು ಸಮಾಲೋಚನೆಯ ಸಾಧ್ಯತೆ ಇದ್ದು, ಭಾರತ ಹಾಗು ಜಪಾನ್ ನಡುವಿನ ಬಾಂಧವ್ಯದಲ್ಲಿ ಸಾಕಷ್ಟು ವೃದ್ಧಿಯಾಗುತ್ತಿದ್ದು, ಇದನ್ನು ವಿಶೇಷ ವ್ಯೂಹಾತ್ಮಕ ಹಾಗು ಜಾಗತಿಕ ಪಾಲುದಾರಿಕೆಯ ಮಟ್ಟದಲ್ಲಿ ಉಲ್ಲೇಖಿಸಲಾಗುತ್ತಿದೆ.