ತಿತ್ಲಿ ಚಂಡಮಾರುತ : ಬೆಂಗಳೂರು- ಭುವನೇಶ್ವರ್ ನಡುವೆ ವಿಶೇಷ ರೈಲು ಕಾರ್ಯಾಚರಣೆ !

ತಿತ್ಲಿ ಚಂಡಮಾರುತದ ಕಾರಣ ದಕ್ಷಿಣ ರಾಜ್ಯ ಕಡೆಗೆ ಆಗಮಿಸುವ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರು-ಹಾಗೂ ಒಡಿಶಾದ ಭುವನೇಶ್ವರ್ ನಡುವೆ ಪಾಸ್ಟ್ ತಾತ್ಕಲ್ ವಿಶೇಷ ರೈಲು ಓಡಾಟ ಆರಂಭಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ್ : ತಿತ್ಲಿ ಚಂಡಮಾರುತದ ಕಾರಣ ದಕ್ಷಿಣ ರಾಜ್ಯ ಕಡೆಗೆ ಆಗಮಿಸುವ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರು-ಹಾಗೂ  ಒಡಿಶಾದ ಭುವನೇಶ್ವರ್ ನಡುವೆ ಪಾಸ್ಟ್ ತಾತ್ಕಲ್  ವಿಶೇಷ ರೈಲು ಕಾರ್ಯಾಚರಣೆ ಆರಂಭಿಸಲಿದೆ

ಈ ವಿಶೇಷ ರೈಲು ಇದೇ 15 ರಂದು ಬೆಳಗ್ಗೆ 7-50ಕ್ಕೆ ಭುವನೇಶ್ವರದಿಂದ ಬೆಂಗಳೂರಿಗೆ ಹೊರಡಲಿದೆ ಎಂದು ಪೂರ್ವ ಕರಾವಳಿ ರೈಲ್ವೆ ಮಂಡಳಿ ಮಾಹಿತಿ ನೀಡಿದೆ.

ಭುವನೇಶ್ವರ್- ಬೆಂಗಳೂರು ಮಾರ್ಗ ಮಧ್ಯದಲ್ಲಿ ಬರುವ ಕುರ್ದಾ ರಸ್ತೆ, ಬ್ರಹ್ಮಪುರ್, ಪಾಲ್ಸಾ, ಶ್ರೀಕಾಕುಲಂ, ವಿಜಯನಗರ, ವಿಶಾಖಪಟ್ಟಣ , ರಾಜಮುಂಡ್ರಿ, ವಿಜಯವಾಡ, ಪೆರಂಬೂರು, ಜೊಲಾರ್ ಪೇಟೆ,  ಬಂಗಾರಪೇಟೆ,  ಕೆ. ಆರ್. ಪುರಂ ನಲ್ಲಿ ಈ ರೈಲು ನಿಲುಗಡೆಯಾಗಲಿದೆ.

ತಿತ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಓಡಿಶಾದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 14 ರಾಷ್ಟ್ರೀಯ ವಿಪತ್ತು ಹಾಗೂ 26 ಒಡಿಶಾ ವಿಪತ್ತು  ನಿರ್ವಹಣಾ ಪಡೆಯಿಂದ  ಕಾರ್ಯಾಚರಣೆ ನಡೆಸಲಾಗುತ್ತಿದೆ.
ಚಂಡಮಾರುತದಿಂದಾಗಿ ಒಡಿಶಾದ  ಗಂಜಾಂ, ಗಜಪೇಟೆ, ಮತ್ತು ರಾಯಗಡ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com