ಮಧ್ಯ ಪ್ರದೇಶ: ಟ್ರಕ್ ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್, ಟ್ರಕ್ ಚಾಲಕ ಗಂಭೀರ

ಮಧ್ಯ ಪ್ರದೇಶದಲ್ಲಿ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಟ್ರಕ್ ಚಾಲಕ ಗಭೀರವಾಗಿ ಗಾಯಗೊಂಡಿದ್ದಾನೆ.
ಹಳಿ ತಪ್ಪಿದ ರೈಲು
ಹಳಿ ತಪ್ಪಿದ ರೈಲು
ಭೋಪಾಲ್: ಮಧ್ಯ ಪ್ರದೇಶದಲ್ಲಿ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಟ್ರಕ್ ಚಾಲಕ ಗಭೀರವಾಗಿ ಗಾಯಗೊಂಡಿದ್ದಾನೆ.
ಮಧ್ಯ ಪ್ರದೇಶದ ತಾಂಡ್ಲಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 6.44ರ ಸಂದರ್ಭದಲ್ಲಿ ದೆಹಲಿ-ತಿರುವನಂತಪುರಂ ನಡುವೆ ಸಂಚರಿಸುವ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್  ರಾಜಧಾನಿ ಎಕ್ಸೆ ಪ್ರೆಸ್ ರೈಲು ರೈಲ್ವೇ ಕ್ರಾಸಿಂಗ್ ಬಳಿ ಗೂಡ್ಸ್ ಟ್ರಕ್ ಗೆ ರೈಲು ಢಿಕ್ಕಿ ಹೊಡೆದಿದೆ.
ಪರಿಣಾಮ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ರೈಲಿನ ಬಿ7 ಮತ್ತು ಬಿ8 ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿದಂತೆ ರೈಲ್ವೇ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com