ಬಿಕಾನೆರ್; ದೇಶದ ಗಡಿ ಕಾಯುವ ಯೋಧರೊಂದಿಗೆ ದಸರಾ ಹಬ್ಬವನ್ನು ಆಚರಣೆ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿನ್ನೆಯಷ್ಟೇ ದೇಶದಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಗುಜರಾತ್ ರಾಜ್ಯದ ಬಿಕಾನೆರ್'ನ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಸೈನಿಕರೊಂದಿಗೆ ರಾಜನಾಥ್ ಸಿಂಗ್ ಅವರು ಹಬ್ಬವನ್ನು ಆಚರಿಸಿದ್ದಾರೆ.
ಹಬ್ಬದ ಆಚರಣೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬರೆದಿರುವ ಅವರು, ಯೋಧರ ಕುಟುಂಬಗಳ ಜೊತೆಗೆ ಹಬ್ಬ ಆಚರಣೆ ಮಾಡಿದ್ದು, ಬಹಳ ಸಂತಸವನ್ನು ತಂದಿದೆ. ನಮ್ಮ ಗಡಿ ಭದ್ರತಾ ಪಡೆಗಳ ಯೋಧರಿಗೆ ಅವರ ಕುಟುಂಬಗಳೇ ಬೆನ್ನೆಲು ಎಂದು ಕೊಂಡಾಡಿದ್ದಾರೆ.