ಹೈದರಾಬಾದ್ ಪತ್ರಕರ್ತೆ ಸೇರಿದಂತೆ ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಯಾತ್ರೆ ಕೈಗೊಂಡಿರುವ ಮಹಿಳೆಯರು!

ಹೈದರಾಬಾದ್ ಪತ್ರಕರ್ತೆ ಪೊಲೀಸರ ರಕ್ಷಣೆಯಲ್ಲಿ ಶಬರಿಮಲೆಗೆ ತೆರಳುತ್ತಿದ್ದಾರೆ. ಕೊಚ್ಚಿಯ ಮಹಿಳೆ ಜೊತೆ ತಾವು ಶಬರಿಮಲೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ...
ಶಬರಿಮಲೆ ಅಯ್ಯಪ್ಪ ದೇವಾಲಯ
ಶಬರಿಮಲೆ ಅಯ್ಯಪ್ಪ ದೇವಾಲಯ
ಪಂಪ: ಹೈದರಾಬಾದ್ ಪತ್ರಕರ್ತೆ  ಪೊಲೀಸರ ರಕ್ಷಣೆಯಲ್ಲಿ ಶಬರಿಮಲೆಗೆ ತೆರಳುತ್ತಿದ್ದಾರೆ. ಕೊಚ್ಚಿಯ ಮಹಿಳೆಯರ ಜೊತೆ ತಾವು ಶಬರಿಮಲೆಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ನ  ಸುಹಾಸಿನಿ ರಾಜ್ ನಿನ್ನೆ ಶಬರಿಮಲೆಗೆ ದೇವಾಲಯ ಪ್ರವೇಶಿಸಲು ವಿಫಲರಾಗಿದ್ದರು. ಇಂದು ಮೊಜೋ ಟಿವಿ ಪತ್ರಕರ್ತೆ ಕವಿತಾ, ಸಂಪ್ರದಾಯದಂತೆ ಕಪ್ಪು ಬಟ್ಟೆ ಧರಿಸಿ ಪೊಲೀಸರ ಜೊತೆ ಯಾತ್ರೆ ಕೈಗೊಂಡಿದ್ದಾರೆ. 
ಇನ್ನು ರಕ್ಷಣೆಗಾಗಿ ಹೆಲ್ಮೆಟ್ ಕೂಡ ಧರಿಸಿದ್ದಾರೆ. ಐಡಿ ಶ್ರೀಜಿತ್ ನೇತೃತ್ವದ ತಂಡ ಅವರಿಗೆ ರಕ್ಷಣೆ ನೀಡಿದೆ,  20 ವರ್ಷದ ಕವಿತಾ ಒಂದು ವೇಳೆ ಶಬರಿಮಲೆ ಪ್ರವೇಶಿಸಲು ಸಫಲವಾದರೇ, ಮುಟ್ಟಾಗುತ್ತಿದ್ದರೂ  ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮೊದಲ ಮಹಿಳೆಯಾಗುತ್ತಾರೆ.  ಇದುವರೆಗೂ ಮುಟ್ಟಾಗುವ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಿಸರು ಅನುಮತಿಯಿರಲಿಲ್ಲ.
ಕಳೆದ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿದ್ದು, ತೀರ್ಪು ಪ್ರಕಟವಾದ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ತೆರೆಯಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com