ಶಬರಿಮಲೆ ದೇವಾಲಯದ ಹಿಂಸಾಚಾರಕ್ಕೆ ಆರ್ ಎಸ್ ಎಸ್ ಕಾರಣ- ಯೆಚೂರಿ ಆರೋಪ

ಶಬರಿಮಲೆ ದೇವಾಲಯದ ಹಿಂಸಾಚಾರಕ್ಕೆ ಆರ್ ಎಸ್ ಎಸ್ ಕಾರಣ ಎಂದು ಸಿಪಿಐ -ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಇಂತಹ ಹಿಂಸಾಚಾರ ಉಂಟಾಗಿತ್ತು ಎಂದು ಹೇಳಿದ್ದಾರೆ.
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ

ಚೆನ್ನೈ: ಶಬರಿಮಲೆ ದೇವಾಲಯದ ಹಿಂಸಾಚಾರಕ್ಕೆ ಆರ್ ಎಸ್ ಎಸ್ ಕಾರಣ ಎಂದು  ಸಿಪಿಐ -ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಇಂತಹ ಹಿಂಸಾಚಾರ ಉಂಟಾಗಿತ್ತು ಎಂದು ಹೇಳಿದ್ದಾರೆ.

ಸಮಾಜದಲ್ಲಿ ಸೌಹಾರ್ದಾತೆ ಹಾಳು ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ. ಕೇಸರಿ ಪಡೆಯ ಸ್ವಯಂ ಸೇವಕರು ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಮಾದರಿಯಲ್ಲೇ  ಶಬರಿಮಲೆಗೆ ತೆರಳುತ್ತಿದ್ದ ಮಹಿಳೆಯರ ಮೇಲೆ ದೌರ್ಜನ್ಯವೆಸಲಾಗಿದೆ ಎಂದು ಅವರು ಆರೋಪಿಸಿದರು.

ಭಕ್ತಾಧಿಗಳ ಹೆಸರಿನಲ್ಲಿ ಕೆಲ ಸಮಾಜ ವಿರೋಧಿ ಶಕ್ತಿಗಳು ಶಬರಿಮಲೆ ಪ್ರದೇಶದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ  ಕೇರಳದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಎಂದು ಕೇರಳ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ದೂಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com