ಅಮೃತಸರ ರೈಲು ದುರಂತ: ಅನುಮತಿಯಿಲ್ಲದೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು!

ಅನುಮತಿಯಿಲ್ಲದೆಯೇ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅಮೃತಸರದಲ್ಲಿ ಸಂಭವಿಸಿದ ರೈಲು ದುರಂತ ಪ್ರಕರಣದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ...
ಪ್ರತ್ಯಕ್ಷದರ್ಶಿ
ಪ್ರತ್ಯಕ್ಷದರ್ಶಿ
ಅಮೃತಸರ: ಅನುಮತಿಯಿಲ್ಲದೆಯೇ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅಮೃತಸರದಲ್ಲಿ ಸಂಭವಿಸಿದ ರೈಲು ದುರಂತ ಪ್ರಕರಣದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 
ದುರಂತಕ್ಕೆ ರಾಜಕೀಯ ಪಕ್ಷಗಳೇ ಕಾರಣ ಛೌರಾ ಬಜಾರ್ ಬಳಿಯಿರುವ ರೈಲ್ವೆ ಹಳಿ ಬಳಿ ರಾಜಕೀಯ ಪಕ್ಷವೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ಹೇಳಿದ್ದಾರೆ. 
ಅನುಮತಿಯಿಲ್ಲದೆಯೇ ಕಾಂಗ್ರೆಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದರು. ರೈಲಿನಲಿಡಿ ಸಿಲುಕಿ ಜನರು ನರಳುತ್ತಿದ್ದರೂ, ಸಿಧು ಪತ್ನಿ ತಮ್ಮ ಭಾಷಣವನ್ನು ಮುಂದುವರೆಸಿದ್ದರು ಎಂದು ತಿಳಿಸಿದ್ದಾರೆ. 
ಇದರಂತೆ ಮತೊಬ್ಬ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದು, ಘಟನೆಗೆ ಸಮಿತಿ ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ನೇರಹೊಣೆಯಾಗಿದ್ದಾರೆ. ಕಾರ್ಯಕ್ರಮ ಆಯೋಜಿಸಿದ್ದ ಸಮಿತಿ ರೈಲು ಬರುವ ವೇಳೆ ಘೋಷಣೆ ಮಾಡಿ ಜನರಿಗೆ ಮಾಹಿತಿ ನೀಡಬೇಕಿತ್ತು. ಇಲ್ಲವೇ ರೈಲು ನಿಧಾನಗತಿಯಲ್ಲಿ ಬರುವಂತೆ ನೋಡಿಕೊಳ್ಳಬಹುದಿತ್ತು. ಆದರೆ, ಅದಾವುದನ್ನೂ ಅವರು ಮಾಡಿರಲಿಲ್ಲ ಎಂದಿದ್ದಾರೆ. 
ದುರಂತ ಸಂಭವಿಸಿದ್ದು ಹೇಗೆ? 
ಅಮೃತಸರ ಸಮೀಪದ ಜೋಡಾ ಫಾಟಕ್ ಎಂಬಲ್ಲಿ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ  ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರು ಮುಖ್ಯ ಅತಿಥಿಯಾಗಿದ್ದರು. 
ರೈಲ್ವೆ ಹಳಿಯ ಸಮೀಪದಲ್ಲಿಯೇ ನಡೆಯುವ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸಾವಿರಾರು ಜನರು ಆಗಮಿಸಿದ್ದರು. ಈ ಪೈಕಿ ಒಂದಷ್ಟು ಜನ ರೈಲ್ವೆ ಹಳಿಯ ಮೇಲೆ ನಿಂತಿದ್ದರು. ರಾತ್ರಿ 8 ಗಂಟೆ ವೇಳೆಗೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಲೇ, ಮುಗಿಲೆತ್ತರಕ್ಕೆ ಅಗ್ನಿಜ್ವಾಲೆ ಹಬ್ಬಿತ್ತು. ಈ ನಡುವೆ ಅದರೊಳಗೆ ಇಡಲಾಗಿತ್ತ ಪಟಾಕಿ ಭಾರೀ ಸದ್ದಿನೊಂದಿಗೆ ಸ್ಫೋಟಿಸಲು ಆರಂಭವಾಗಿತ್ತು. ಈ ವೇಳೆ ದೂರದಲ್ಲಿ ನಿಂತಿದ್ದ ಜನರು ಸಮೀಪದಿಂದ ಘಟನೆ ವೀಕ್ಷಿಸುವ ಸಲುವಾಗಿ ರೈಲ್ವೆ ಹಳಿಯತ್ತ ಧಾವಿಸಿದ್ದರು. 
ಇದೇ ಸಮಯದಲ್ಲಿ ಜಲಂಧರ್ ನಿಂದ ಅಮೃತಸರಕ್ಕೆ ಮತ್ತು ಅಮೃತಸರದಿಂದ ಜಲಂಧರಕ್ಕೆ ತೆರಳುವ ಎರಡು ರೈಲುಗಳು ಏಕಕಾಲದಲ್ಲಿ ವಿರುದ್ಧ ದಿಕ್ಕಿನಲ್ಲಿ ಅದೇ ಸ್ಥಳದತ್ತ ಧಾವಿಸಿದ್ದವು. ಆದರೆ, ಪಟಾಕಿ ಸದ್ದಿನಿಲ್ಲಿ, ರೈಲು ಆಗಮಿಸಿದ ಸುಳಿವು ಜನರಿಗೆ ಗೊತ್ತಾಗಲಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ನೂರಾರು ಜನರ ಮೇಲೆ ರೈಲು ಹರಿದು ಹೋಗಿದೆ. ಎರಡೂ ದಿಕ್ಕಿನಿಂದ ರೈಲು ಆಗಮಿಸಿದ ಕಾರಣ ಜನರಿಗೆ ತಪ್ಪಿಸಿಕೊಳ್ಳಲೂ ಅವಕಾಶ ಸಿಗಲಿಲ್ಲ. ಪರಿಣಾಮ 61 ಜನರು ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com