ಕಳೆದ 3 ವರ್ಷಗಳಲ್ಲಿ ರೈಲು ಡಿಕ್ಕಿ ಹೊಡೆದು 50 ಸಾವಿರ ಮಂದಿ ಸಾವು

2015ರಿಂದ 2017ರ ವರೆಗೆ ದೇಶದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 50 ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2015ರಿಂದ 2017ರ ವರೆಗೆ ದೇಶದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 50 ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಮಾಹಿತಿ ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.
ಇತ್ತೀಚಿಗಷ್ಟೇ ಪಂಜಾಬ್ ಅಮೃತಸರದ ಬಳಿ ದಸರಾ ಹಬ್ಬದಂದು ರಾವಣ ದಹನ ವೀಕ್ಷಿಸುತ್ತಿದ್ದ ಜನರ ಮೇಲೆ ರೈಲು ಹರಿದು ಕನಿಷ್ಠ 59 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಈಗ ಕೇವಲ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕು ಸುಮಾರು 50 ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವ ಮಾಹಿತಿ ಹೊರ ಬಿದ್ದಿದೆ.
ರೈಲ್ವೆ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, 2015ರಿಂದ 2017ರ ವರೆಗೆ ರೈಲು ಡಿಕ್ಕಿ ಹೊಡೆದು ಒಟ್ಟು 49,790 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರ ರೈಲ್ವೆ ವಲಯದಲ್ಲಿ 7,908, ದಕ್ಷಿಣ ರೈಲ್ವೆ ವಲಯದಲ್ಲಿ 6,149 ಮತ್ತು ಪೂರ್ವ ರೈಲ್ವೆ ವಲಯದಲ್ಲಿ 5,670 ಸಾವುಗಳು ಸಂಭವಿಸಿವೆ.
ರೈಲ್ವೆ ಪೊಲೀಸರು ವಲಯವಾರು ಸಾವುಗಳ ಅಂಕಿ ಅಂಶ ಸಂಗ್ರಹಿಸುತ್ತಿದ್ದು, ಈ ವರ್ಷದ ಅಂಕಿ ಅಂಶ ಇನ್ನೂ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನ ಹಳಿಗಳ ಮೇಲೆ ನಿಂತು, ಸುರಕ್ಷತೆ ಮತ್ತು ಎಚ್ಚರಿಕೆಯ ಸೂಚನೆಗಳನ್ನು ಉಲ್ಲಂಘಿಸುವುದು, ಮೇಲ್ಸೆೇತುವೆಗಳನ್ನು ಬಳಸದಿರುವುದು ಮತ್ತು ಹಳಿ ದಾಟುವಾಗ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿರುವುದು ಈ ಸಾವುಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com