ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಇಂದು ತೆರೆ: 5 ದಿನಗಳ ಮಾಸಿಕ ಪೂಜೆ ಅಂತ್ಯ

ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯಾಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಂಪಾ: ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯಾಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾಗುತ್ತಾ ಬಂದಿದ್ದರೂ, ಈ ವರೆಗೂ 10-50 ವರ್ಷದೊಳಗಿನ ಒಬ್ಬರೋ ಒಬ್ಬ ಮಹಿಳೆಯರೂ ದರ್ಶನ ಸಿಕ್ಕಿಲ್ಲ. 
ಭಾನುವಾರ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಗಳನ್ನು ನಡೆದಿರೂ ತಡೆ ಒಡ್ಡಲಾಯಿತು. ಈ ನಡುವೆ ಮಾಸಿಕ ಪೂಜೆ ನಿಮಿತ್ತ ತೆರೆಯಲಾಗಿರುವ ದೇಗುಲ ಇಂದು ಸಂಜೆ ಬಂದ್ ಆಗಲಿದೆ. ಕಳೆದ 5 ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ ತಾತ್ಕಾಲಿಕ ವಿರಾಮ ಸಿಗಲಿದೆ. 
ಆದರೆ, ಮುಂದಿನ ತಿಂಗಳಿನಿಂದ ಶಬರಿಮಲೆ 2 ತಿಂಗಳ ಶಬರಿಮಲೆ ಸೀಸನ್ ಆರಂಭವಾಗಲಿದ್ದು, ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ, ಪೊಲೀಸರಿಗೆ ಆತಂಕ ಶುರುವಾಗಿದೆ. 
ಪ್ರತಿಭಟನಾಕಾರರ ಅಡೆ, ತಡೆ, ಆಕ್ರೋಶದ ನಡುವೆಯೂ ಮಹಿಳೆಯೊಬ್ಬರು ದೇಗುಲ ಪ್ರವೇಶಿಸುವ ಸಲುವಾಗಿ ಭಾನುವಾರ ದಾರಿಯನ್ನು ಕ್ರಮಿಸಲು ಯತ್ನಿಸಿದ್ದರು. ಪೊಲೀಸ್ ಭದ್ರತೆ ರಹಿತವಾಗಿ 4 ಕಿ.ಮೀ ದೂರ ಕ್ರಮಿಸಿದ 47 ವರ್ಷದ ಬಾಲಮ್ಮ ಎಂಬ ಮಹಿಳೆಯನ್ನು ಪ್ರತಿಭಟನಾಕಾರರು ತಳ್ಳಾಡಿದ್ದಾರೆ. ಹೀಗಾಗಿ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಇದೇ ವೇಳೆ ಶಬರಿಮಲೆ ಏರುತ್ತಿದ್ದ 40ರ ಪ್ರಾಯದ ತೆಲುಗುಭಾಷಿಕ ಇಬ್ಬರು ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆದಿದ್ದಾರೆ. ಬಂಧುಗಳ ಜೊತೆ ಯಾತ್ರೆ ಕೈಗೊಂಡಿದ್ದ ಆ ಇಬ್ಬರೂ ಮಹಿಳೆಯರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
ಅಯ್ಯಪ್ಪ ದೇಗುಲದ ಸಂಪ್ರದಾಯದ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆಯರು ಮುಚ್ಚಳಿಕೆ ಬರೆದುಕೊಂಡಿದ್ದಾರೆ. ಈ ಇಬ್ಬರೂ ಮಹಿಳೆಯರ ಜೊತೆಗಿದ್ದ 50 ವರ್ಷ ಮೀರಿದ ಮಹಿಳೆಯರು ದೇಗುಲಕ್ಕೆ ಹೋಗಲು ಅನುಮತಿ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com