ಮೃತ ಭಯೋತ್ಪಾದಕರ ದೇಹ ಪಡೆಯುವಂತೆ ಪಾಕಿಸ್ತಾನಕ್ಕೆ ಕೇಳಿದ ಭಾರತೀಯ ಸೇನೆ!
ಪಾಕಿಸ್ತಾನ ಸೇನಾ ಸಮವಸ್ತ್ರ ಧರಿಸಿ ಜಮ್ಮು ಮ್ತತು ಕಾಶ್ಮೀರದ ಗಡಿ ನಸುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರನ್ನು ಭಾರತಿಯ ಸೇನೆ ಹೊಡೆದುರುಳಿಸಿದ್ದು, ಭಯೋತ್ಪಾದಕರ ಮೃತದೇಹಗಳನ್ನು ಹೊತ್ತುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮಂಗಳವಾರ ಹೇಳಿದೆ...
ನವದೆಹಲಿ: ಪಾಕಿಸ್ತಾನ ಸೇನಾ ಸಮವಸ್ತ್ರ ಧರಿಸಿ ಜಮ್ಮು ಮ್ತತು ಕಾಶ್ಮೀರದ ಗಡಿ ನಸುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರನ್ನು ಭಾರತಿಯ ಸೇನೆ ಹೊಡೆದುರುಳಿಸಿದ್ದು, ಭಯೋತ್ಪಾದಕರ ಮೃತದೇಹಗಳನ್ನು ಹೊತ್ತುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮಂಗಳವಾರ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಸುಂದರ್ ಬನಿ ಸೆಕ್ಟರ್ ಬಳಿ ಭಾರತದ ಗಡಿ ನುಸುಳಲು ಉಗ್ರರು ಯತ್ನ ನಡೆಸುತ್ತಿದ್ದರು. ಈ ವೇಳೆ ದಿಟ್ಟ ಉತ್ತರ ನೀಡಿದ್ದ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿತ್ತು. ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು.
ಇದೀಗ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಭಾರತೀಯ ಸೇನೆ, ಭಯೋತ್ಪಾದಕರ ಮೃತದೇಹಗಳನ್ನು ಹೊತ್ತುಕೊಂಡು ಹೋಗುವಂತೆ ತಿಳಿಸಿದ್ದು, ಈ ಮೂಲಕ ಪಾಕಿಸ್ತಾನದ ನೆಲದಲ್ಲಿ ನಡೆಸಲಾಗುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಅಂತ್ಯ ಹಾಡುವಂತೆ ಎಚ್ಚರಿಕೆ ನೀಡಿದೆ.