ಸಿಬಿಐ ಒಳಜಗಳ: ಅಲೋಕ್ ವರ್ಮಾ, ರಾಕೇಶ್ ಅಸ್ತಾನಗೆ ಕಡ್ಡಾಯ ರಜೆ; ನಾಗೇಶ್ವರ್ ರಾವ್ ಅಧಿಕಾರ ಸ್ವೀಕಾರ

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಅಂತರ್ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಆ ವಿಶೇಷ...
ರಾಕೇಶ್ ಆಸ್ತಾನ-ಅಲೋಕ್ ವರ್ಮಾ
ರಾಕೇಶ್ ಆಸ್ತಾನ-ಅಲೋಕ್ ವರ್ಮಾ
ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಅಂತರ್ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಆ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. 
ಇನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ನೇಮಕ ಮಾಡಿದೆ. 
ಪ್ರಧಾನಿ ನೇತೃತ್ವದ ನೇಮಕಾತಿ ಸಮಿತಿ ಎಂ ನಾಗೇಶ್ವರ್ ರಾವ್ ರನ್ನು ಸಿಬಿಐನ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿದ್ದು ಅಂತೆ ನಾಗೇಶ್ವರ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. 
ವರದಿಗಳ ಪ್ರಕಾರ, ಸದ್ಯ ಸಿಬಿಐ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದ್ದು ಅಧಿಕಾರಿಗಳು ಹೊರಗಡೆ ನಿಂತಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಅಲೋಕ್ ವರ್ಮಾ ವಿರುದ್ಧವೇ ಸುಮಾರು 10 ಪ್ರಕರಣಗಳಲ್ಲಿ ಹಲವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ರಾಕೇಶ್ ಆಸ್ತಾನ ಸಹ ಆರೋಪಿಸಿದ್ದರು. ಈ ಕುರಿತು ಸಂಪುಟ ಕಾರ್ಯದರ್ಶಿ ಹಾಗೂ ಕೇಂದ್ರ ಜಾಗೃತ ಆಯೋಗಕ್ಕೂ ಪತ್ರ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com