ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ

ಭಾರತದ ನೌಕಾಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಕ್ಷಿಪಣಿಗಳ ಪೂರೈಕೆ ಗುತ್ತಿಗೆ ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾಗಿದೆ.
ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ
ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ
ಟೆಲ್ ಅವೀವ್: ಭಾರತದ ನೌಕಾಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಕ್ಷಿಪಣಿಗಳ ಪೂರೈಕೆ ಗುತ್ತಿಗೆ ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾಗಿದೆ. 
ನೌಕಾಪಡೆಯಲ್ಲಿರುವ 7 ಹಡಗುಗಳಿಗೆ ಬೇಕಾಗಿರುವ ಸುಮಾರು 777 ಮಿಲಿಯನ್ ಡಾಲರ್ ವೆಚ್ಚದ ಕ್ಷಿಪಣಿ ವ್ಯವಸ್ಥೆ ಪೂರೈಕೆ ಗುತ್ತಿಗೆ ಸಂಸ್ಥೆಗೆ ಸಿಕ್ಕಿದೆ ಎಂದು ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 
ಈ ಗುತ್ತಿಗೆ ಬಿಇಎಲ್ ಕೈಲಿದ್ದು ಈ ಯೋಜನೆಯ ಮುಖ್ಯ ಗುತ್ತಿಗೆದಾರ ಸಂಸ್ಥೆಯೂ ಆಗಿದೆ. ದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಸಾಮರ್ಥ್ಯವುಳ್ಳ ಕ್ಷಿಪಣಿ (ಎಲ್ ಆರ್ ಎಸ್ಎಎಂ) ಬರಾಕ್ 8 ಶ್ರೇಣಿಯ ಭಾಗವಾಗಿದ್ದು, ಇಸ್ರೇಲ್ ನೌಕಾಪಡೆ ಬಳಕೆ ಮಾಡುತ್ತಿರುವ ವಾಯು ಹಾಗೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. 
ಇಸ್ರೇಲ್ ರಕ್ಷಣಾ ಕ್ಷೇತ್ರಕ್ಕೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ರಕ್ಷಣಾ ಕ್ಷೇತ್ರವಷ್ಟೇ ಅಲ್ಲದೇ ಕೃಷಿ ಕ್ಷೇತ್ರ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಭಾರತ-ಇಸ್ರೇಲ್ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ತೀರ್ಮಾನಿಸಿವೆ, 
ಕಳೆದ ವರ್ಷ ಐಎಐ ಭಾರತೀಯ ಸೇನಾಪಡೆ ಹಾಗೂ ನೌಕಾಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ ಮಾಡುವ ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗೆ ಸಹಿ ಹಾಕಿತ್ತು. ಇದಷ್ಟೇ ಅಲ್ಲದೇ ಬರಾಕ್-8 ಕ್ಷಿಪಣಿ ವ್ಯವಸ್ಥೆಯನ್ನು ಪೂರೈಕೆ ಮಾಡುವುದಕ್ಕೆ ಬಿಇಎಲ್ ನೊಂದಿಗೆ ಸುಮಾರು 630 ಮಿಲಿಯನ್ ಡಾಲರ್ ಮೊತ್ತದ ಯೋಜನೆಗೆ ಸಹಿ ಹಾಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com