ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕತೆ ಮೋದಿನಾಮಿಕ್ಸ್ ಎಂದೇ ಪ್ರಸಿದ್ಧಿ ಪಡೆದಿದ್ದು, " ವಿಶ್ವದ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವುದಕ್ಕೆ ನರೇಂದ್ರ ಮೋದಿ ಅವರ ಕೊಡುಗೆಗಳನ್ನು ಗುರುತಿಸಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಿದ್ದು ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್, ದೃಢ ಸ್ವಚ್ಛ ಆಡಳಿತ ಸೇರಿದಂತೆ ಮೋದಿ ಸರ್ಕಾರದ ಅಭೂತಪೂರ್ವ ನಿರ್ಧಾರಗಳನ್ನು ಆಯ್ಕೆ ಸಮಿತಿ ಶ್ಲಾಘಿಸಿದೆ. ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನ (ಸಿಯೋಲ್ ಪೀಸ್ ಪ್ರೈಜ್ ಕಲ್ಚರಲ್ ಫೌಂಡೇಶನ್) ಅಧ್ಯಕ್ಷ ಕ್ವೋನ್ ಇ-ಹ್ಯೋಕ್ ಈ ಸಂಬಂಧ ಅಧಿಕೃತ ಪ್ರಕಟಣೆ ನೀಡಿದ್ದಾರೆ.