ದೇಶಕ್ಕೆ ಮುಂದಿನ 10 ವರ್ಷಗಳ ಕಾಲ ಸುಭದ್ರ, ಸ್ಥಿರ, ನಿರ್ಣಾಯಕ ಸರ್ಕಾರದ ಅಗತ್ಯವಿದೆ- ದೊವಾಲ್

ಮುಂದಿನ 10 ವರ್ಷಗಳ ಕಾಲ ದೇಶದಲ್ಲಿ ಸುಭದ್ರ , ಸ್ಥಿರ ಹಾಗೂ ನಿರ್ಣಾಯಕ ಸರ್ಕಾರದ ಅಗತ್ಯವಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಹೇಳಿದ್ದಾರೆ.
ಅಜಿತ್ ದೋವಾಲ್
ಅಜಿತ್ ದೋವಾಲ್
Updated on: 

ನವದೆಹಲಿ: ಮುಂದಿನ 10 ವರ್ಷಗಳ ಕಾಲ ದೇಶದಲ್ಲಿ ಸುಭದ್ರ , ಸ್ಥಿರ ಹಾಗೂ ನಿರ್ಣಾಯಕ ಸರ್ಕಾರದ ಅಗತ್ಯವಿದೆ ಎಂದು  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಹೇಳಿದ್ದಾರೆ. ದುರ್ಬಲ ಮೈತ್ರಿ ಸರ್ಕಾರದಿಂದ ದೇಶಕ್ಕೆ ಹಾನಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಾವು ಜನರ ಪ್ರತಿನಿಧಿಯಿಂದ ಆಡಳಿತ ನಡೆಸುತ್ತಿಲ್ಲ. ಆದರೆ, ಅವರೇ ಕಾನೂನು ಮಾಡಿದ್ದು, ಕಾನೂನು ಪ್ರಮುಖವಾಗಿದ್ದು,  ಎಲ್ಲಾ ರಕ್ಷಣಾ  ಯಂತ್ರೋಪಕರಣಗಳು ಶೇ. 100 ರಷ್ಟು ತಂತ್ರಜ್ಞಾನದಿಂದ ಕೂಡಿವೆ. ಇದು ಹೊಸ ಸರ್ಕಾರದ ನೀತಿಯಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

ಚೀನಾದ ಅಲಿಬಾಬಾ ಮತ್ತಿತರ ಕಂಪನಿಗಳು ಹೇಗೆ ದೊಡ್ಡ ಕಂಪನಿಯಾದ್ದವು,  ಅವುಗಳಿಗೆ ಚೈನಾ ಸರ್ಕಾರ ಹೇಗೆ ಬೆಂಬಲ ನೀಡಿತ್ತು ಎಬುದು ಗೊತ್ತಿದೆ. ಭಾರತದ ರಕ್ಷಣಾತ್ಮಕ ಹಿತಾಸಕ್ತಿಯಲ್ಲಿ ಖಾಸಗಿ  ಕ್ಷೇತ್ರದ ಕಂಪನಿಗಳಿಗೆ ಉತ್ತೇಜಿಸಬೇಕಾಗಿದೆ ಎಂದರು.

ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದರೆ  ನಮ್ಮ ಆರ್ಥಿಕ ಸ್ಥಿತಿಯೂ ದೊಡ್ಡದಾಗುತ್ತದೆ. ತಂತ್ರಜ್ಞಾನದ ಮೂಲಕ ಜಾಗತಿಕವಾಗಿಯೂ ಪೈಪೋಟಿ ನಡೆಸಬಹುದು ಎಂದು ಅಜಿತ್ ದೂವಾಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com