ಸಿಬಿಐ ನೂತನ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ್ ರಾವ್
ಸಿಬಿಐ ನೂತನ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ್ ರಾವ್

ಸಿಬಿಐನ ಆಡಳಿತ ಚುಕ್ಕಾಣಿ ಹಿಡಿದಿರುವ ಹೊಸ ತಂಡ

ಆಂತರಿಕ ಕಲಹ ಹಿನ್ನಲೆಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಮತ್ತು ವಿಶೇಷ ...
Published on

ನವದೆಹಲಿ: ಆಂತರಿಕ ಕಲಹ ಹಿನ್ನಲೆಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಗೆ ಕಡ್ಡಾಯ ರಜೆ ಮೇಲೆ ತೆರಳಲು ಸೂಚಿಸಿ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿರುವ ಎಂ ನಾಗೇಶ್ವರ್ ರಾವ್ ಸಿಬಿಐಗೆ ಬಂದಿರುವ ಪ್ರಕರಣಗಳ ತನಿಖೆ ನಡೆಸಲು ಹೊಸ ಮುಖಗಳ ತಂಡವೊಂದನ್ನು ರಚಿಸಿದ್ದಾರೆ.

ಸಿಬಿಐ ತನಿಖಾ ಸಂಸ್ಥೆಯಲ್ಲಿನ ಬದಲಾವಣೆ ತನಿಖಾಧಿಕಾರಿಯಿಂದ ಮೇಲ್ವಿಚಾರಕರ ಮಟ್ಟದವರೆಗೆ ಪರಿಣಾಮ ಬೀರಿದೆ. ನಾಗೇಶ್ವರ ರಾವ್ 1986ರ ಒಡಿಶಾ ವಿಭಾಗದ ಐಪಿಎಸ್ ಅಧಿಕಾರಿಯಾಗಿದ್ದು ಸಂಸ್ಥೆಯಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ಸಂಸ್ಥೆಯ ಹಂಗಾನಿ ನಿರ್ದೇಶಕ ಸ್ಥಾನ ವಹಿಸಿಕೊಂಡಿದ್ದಾರೆ. ತನಿಖೆಗಳ ವಿಚಾರಣೆಗೆ ಅವರು ಸತೀಶ್ ದಾಗರ್ ಅವರನ್ನು ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಿಸಿದ್ದಾರೆ. ದಾಗರ್ ಈ ಹಿಂದೆ ದೇರಾ ಸಚಾ ಸೌದದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಕೇಸಿನಲ್ಲಿ ತನಿಖೆ ನಡೆಸಿದ್ದರು.

ಅಸ್ತಾನಾ ಲಂಚ ಪ್ರಕರಣದಲ್ಲಿ ಡಿಐಜಿ ತರುಣ್ ಗೌಬಾ ವಿಚಾರಣೆ ನಡೆಸಲಿದ್ದಾರೆ. ಇವರು ಮಧ್ಯ ಪ್ರದೇಶದ ವ್ಯಾಪಂ ಕೇಸಿನ ತನಿಖೆ ನಡೆಸಿದ್ದರು. ವಿ ಮುರುಗೇಶನ್ ಅವರನ್ನು ಹೊಸ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದ್ದು ಅವರು ಸಿಬಿಐ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಜಂಟಿ ನಿರ್ದೇಶಕರಾಗಿದ್ದರು. ಕಲ್ಲಿದ್ದಲು ಹಗರಣ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ಶ್ಲಾಘನೆಗೆ ಮುರುಗೇಶನ್ ಪಾತ್ರವಾಗಿದ್ದರು.

ಸಿಬಿಐನಲ್ಲಿ ಅಲೋಕ್ ಕುಮಾರ್ ವರ್ಮಾ ಮತ್ತು ಅಸ್ತಾನಾ ಜೊತೆ ಹೊರಬಂದವರಲ್ಲಿ ಉಪ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎ ಕೆ ಬಸ್ಸಿ ಸೇರಿದ್ದು ಇವರು ತನಿಖಾಧಿಕಾರಿಯಾಗಿದ್ದರು. ಸಾರ್ವಜನಿಕ ಹಿತಾಸಕ್ತಿ ಮೇಲೆ ಇವರನ್ನು ಪೋರ್ಟ್ ಬ್ಲೇರ್ ಗೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಆದೇಶ ತಿಳಿಸಿದೆ.

ಸಿಬಿಐ ಇನ್ನೊಂದು ಆದೇಶದಲ್ಲಿ, ಪೊಲೀಸ್ ವಿಭಾಗದ ಜಂಟಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹ ಅವರನ್ನು ಬಹು ಶಿಸ್ತು ನಿರ್ವಹಣೆ ಸಂಸ್ಥೆಗೆ ವರ್ಗಾಯಿಸಲಾಗಿದೆ. ಇವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ತನಿಖೆ ನಡೆಸುತ್ತಿದ್ದರು.

ಚಂಡೀಗಢ ವಲಯದ ಜಂಟಿ ನಿರ್ದೇಶಕರಾಗಿ ಹಿರಿಯ ಅಧಿಕಾರಿ ಎ ಸಾಯಿ ಮನೋಹರ್ ಅವರನ್ನು ವರ್ಗಾಯಿಸಲಾಗಿದೆ. ಆರ್ಥಿಕ ಅಪರಾಧ-3ರ ಡಿಐಜಿ ಅಮಿತ್ ಕುಮಾರ್ ಅವರನ್ನು ನೀತಿಯ ಜಂಟಿ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ.

ಅಸ್ತಾನಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ನಂತರ ಕಳೆದ ಮಂಗಳವಾರ ಈ ಬೆಳವಣಿಗೆ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com