
ಪುಣೆ: ನಕ್ಸಲ್ ಜೊತೆಗೆ ನಂಟಿನ ಆರೋಪದ ಮೇರೆಗೆ ಬಂಧಿಸಲಾಗಿರುವ ಹೋರಾಟಗಾರರಾದ ಸುಧಾ ಭಾರಾದ್ವಾಜ್ , ವೆರ್ನಾನ್ ಗೊನ್ಸಾಲ್ವ್ಸ್ ಮತ್ತು ಅರುಣ್ ಫೆರೇರಿಯಾ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯ ಇಂದು ತಿರಸ್ಕರಿಸಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಗರ್ ಪರಿಷದ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ಆಗಸ್ಟ್ 28 ರಂದು ತೆಲುಗು ಕವಿ ವರವರ ರಾವ್ ಹಾಗೂ ಗೌತಮ್ ನವಲಖಾ ಸೇರಿದಂತೆ ಐವರನ್ನು ಪುಣೆ ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕೆ. ಡಿ. ವದಾನೆ, ಮೂವರು ಹೋರಾಟಗಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಹೋರಾಟಗಾರರು ನಕ್ಸಲ್ ಜೊತೆಗೆ ನಂಟು ಹೊಂದಿರುವ ಬಗ್ಗೆ ಬಲವಾದ ಪುರಾವೆಗಳಿವೆ. ಪ್ರತಿಷ್ಟಿತ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಬೇತಿ, ಶಸಾಸ್ತ್ರ ಸಂಗ್ರಹದ ಮೂಲಕ ದೇಶದೊಳಗೆ ಕ್ರಾಂತಿಕಾರಿಯಾಗಿದ್ದು, ಅವರಿಗೆ ಜಾಮೀನು ನೀಡಬಾರದೆಂದು ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿದರು.
Advertisement