ವಿಶಾಖಪಟ್ಟಣಂ: ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಆಂಧ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರಿಗೆ ಚಾಕು ಇರಿತ ಪ್ರಕರಣ ಇದೀಗ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಗನ್ ಮೋಹನ್ ರೆಡ್ಡಿ ಅವರಿಗೆ ಚೂರಿ ಇರಿತದ ಪ್ರಕರಣದ ಹಿಂದೆ ಮೋದಿ ಸರ್ಕಾರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಕೀಳುಮಟ್ಟದ ರಾಜಕೀಯದಿಂದ ನಮ್ಮ ಸರ್ಕಾರಕ್ಕೆ ಬೆದರಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾಯ್ಡು ಹೇಳಿದ್ದಾರೆ.
ಜಗನ್ ಮೋಹನ್ ರೆಡ್ಡಿ ಹೈದರಾಬಾದ್ ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಯುವಕನೊಬ್ಬ ಜಗನ್ ಅವರ ಎಡ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ.
ಚೂರಿ ಇರಿದ ಯುವಕನನ್ನು ಜೆ. ಶ್ರೀನಿವಾಸ್ ರಾವ್ ಎಂದು ತಿಳಿದುಬಂದಿದೆ. ಇತ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿನ ರೆಸ್ಟೋರೆಂಟ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಈ ರೆಸ್ಟೋರೆಂಟ್ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ(ಟಿಡಿಪಿ) ನಾಯಕ ಹರ್ಷವರ್ಧನ್ ಅವರಿಗೆ ಸೇರಿದ್ದಾಗಿದೆ.
Jagan Reddy should have complained to the police. He should have taken treatment at government hospital. Modi govt is behind all this drama, indulging in cheap politics & trying to threaten our govt. Law will take its own course: Andhra Pradesh CM N Chandrababu Naidu pic.twitter.com/1qKKI3YjCy