ಉತ್ತರ ಪ್ರದೇಶ: ಶಂಕಿತ ಐಎಸ್ಐ ಏಜೆಂಟ್ ಬಂಧನ
ದೇಶ
ಉತ್ತರ ಪ್ರದೇಶ: ಶಂಕಿತ ಐಎಸ್ಐ ಏಜೆಂಟ್ ಬಂಧನ
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಐಎಸ್ಐ ಏಜೆಂಟ್ ಓರ್ವನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಲಖನೌ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಐಎಸ್ಐ ಏಜೆಂಟ್ ಓರ್ವನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಐಎಸ್ಐ ಏಜೆಂಟ್ ನ್ನು ಜಹೀದ್ ಎಂದು ಗುರುತಿಸಲಾಗಿದ್ದು, ಮೀರಟ್ ಕಂಟೋನ್ಮೆಂಟ್ ಗೆ ಸಂಬಂಧಿಸಿದಂತೆ ರಹಸ್ಯ ವಿವರಗಳನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೆಳಿದ್ದಾರೆ.
ಖುರ್ಜಾ ಜಿಲ್ಲೆಯಲ್ಲಿ ವಾಸವಾಗಿದ್ದ ಜಾಹಿದ್ ಈ ವರ್ಷ 2 ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಜಾಹಿದ್ ನಿಂದ ಎಲೆಕ್ಟ್ರಾನಿಕ್ ಉಪಕರಗಳು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಹೇಳಿದ್ದಾರೆ.

