ಪ್ರಧಾನಿ ಮೋದಿ ' ಡೆಂಗ್ಯೂ ಸೊಳ್ಳೆ' ಎಂದು ಕರೆದ ಕಾಂಗ್ರೆಸ್ ಶಾಸಕಿ !

ಮೋದಿ ಹೆಸರಿನ ಡೆಂಗ್ಯೂ ಸೊಳ್ಳೆಯ ಹೊಸ ತಳಿ ಜನರಲ್ಲಿ ಕಾಯಿಲೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕಿ ಪ್ರಣಿತಿ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಣಿತಿ ಶಿಂಧೆ
ಪ್ರಣಿತಿ ಶಿಂಧೆ

ಸೊಲ್ಲಾಪುರ:  ಮೋದಿ ಹೆಸರಿನ ಡೆಂಗ್ಯೂ ಸೊಳ್ಳೆಯ ಹೊಸ ತಳಿ ಜನರಲ್ಲಿ ಕಾಯಿಲೆಗೆ ಕಾರಣವಾಗಿದೆ  ಎಂದು ಕಾಂಗ್ರೆಸ್ ಪಕ್ಷದ ಶಾಸಕಿ ಪ್ರಣಿತಿ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಮ್ಮ ದೇಶದಲ್ಲಿ ಹೊಸ ಡೆಂಗ್ಯೂ ಸೊಳ್ಳೆ ಇದೆ. ಅದರ ಹೆಸರು ಮೋದಿ ಬಾಬಾ. ಸಹೋದರ, ಸಹೋದರಿಯರೇ  ಹಣದುಬ್ಬರನ್ನು ನಿಯಂತ್ರಿಸುತ್ತೇನೆ. ಪ್ರತಿಯೊಬ್ಬರ ಖಾತೆಗಳಿಗೆ ಲಕ್ಷ ರೂಪಾಯಿ ಜಮೆ ಮಾಡುತ್ತೇನೆ ಎಂದು ಸುಳ್ಳು ಹೇಳುವ ರೋಗ ಹೊಂದಿದ್ದಾರೆ. ಇದರಿಂದಾಗಿ ಎಲ್ಲರೂ ಅವರನ್ನು ಪ್ರೀತಿಸುತ್ತಾರೆ ಎಂದು ಪ್ರಚಾರ ಸಭೆಯೊಂದರಲ್ಲಿ ಅವರು ಹೇಳಿದ್ದಾರೆ.

ಅಲ್ಲದೇ, ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.  ಶಿಂಧೆ ಅವರ ಹೇಳಿಕೆಯನ್ನು ಬಿಜೆಪಿ ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com