ಇದೇ ವೇಳೆ ಬಿಜೆಪಿ ನಾಯಕತ್ವವನ್ನು ಕೊಂಡಾಡಿದ ಅವರು, ನಮ್ಮ ಪಕ್ಷ ಎಂದಿಗೂ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಡೆಯಲಿಲ್ಲ. ಬಿಜೆಪಿ ಕೇವಲ ಒಂದು ಕುಟುಂಬದ ಪಕ್ಷವಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ ನಮ್ಮದಲ್ಲ. ಅಟಲ್ ಬಿಹಾರಿ ವಾಜಪೇಯಿ ಧೀಮಂತ ನಾಯಕ. ಆದರೆ, ಬಿಜೆಪಿ ವಾಜಪೇಯಿ ಹಾಗೂ ಎಲ್.ಕೆ.ಅಡ್ವಾಣಿಯವರಂತಹ ಹೆಸರಿನಿಂದ ಖ್ಯಾತಿ ಪಡೆಯಲಿಲ್ಲ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಂತಹ ನಾಯಕರಿದ್ದಾರೆ. ಆದರೆ, ನಮ್ಮ ಪಕ್ಷ ಇವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ನಮ್ಮ ಪಕ್ಷ ಚಿಂತನೆ ಹಾಗೂ ತತ್ವಗಳೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.